ಉಪ್ಪಳ: ಕೈಕಂಬ ಪೇಟೇಯ ಹೆದ್ದಾರಿ ಬದಿಯಲ್ಲಿ ವಿದ್ಯುತ್ ಕೇಬಲ್ ಅಳವಡಿಸಲು ತೋಡಿದ ಹೊಂಡ; ಅಪಾಯಕ್ಕೆ ಆಹ್ವಾನ

Share with

ಉಪ್ಪಳ: ಕೈಕಂಬ ಪೇಟೇಯ ಹೆದ್ದಾರಿ ಬದಿಯಲ್ಲಿ ವಿದ್ಯುತ್ ಕೇಬಲ್ ಅಳವಡಿಸಲು ತೋಡಿದ ಬೃಹತ್ ಹೊಂಡ ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ.

ಕೈಕಂಬ ಪೇಟೇಯ ಹೆದ್ದಾರಿ ಬದಿಯಲ್ಲಿ ವಿದ್ಯುತ್ ಕೇಬಲ್ ಅಳವಡಿಸಲು ತೋಡಿದ ಹೊಂಡ

ವ್ಯಾಪಾರ ಸಂಸ್ಥೆಗಳು ಹೊಂದಿರುವ ಈ ಪ್ರದೇಶದಲ್ಲಿ ದಿನನಿತ್ಯ ಜನರ ಸಂಚಾರವಿದ್ದು ರಾತ್ರಿ ಹೊತ್ತಲ್ಲಿ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದು ಅನಾಹುತ ಸಂಭವಿಸಬಹುದಾಗಿದೆ.

ಒಂದು ತಿಂಗಳ ಹಿಂದೆ ಹೊಂಡ ತೋಡಲಾಗಿದೆ. ವಿದ್ಯುತ್ ಕೇಬಲ ಅಳವಡಿಸಲಾದರೂ ಮುಚ್ಚದೆ ಬಿಟ್ಟಿರುವುದು ಅಧಿಕೃತರ ನಿರ್ಲಕ್ಷ್ಯವೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹೊಂಡದಿಂದ ಈ ಪರಿಸರದ ವ್ಯಾಪಾರ ಸಂಸ್ಥೆಗಳಿಗೆ ತೆರಳು ಸಮಸ್ಯೆ ಉಂಟಾಗುತ್ತಿರುವುದಾಗಿಯೂ ದೂರಲಾಗಿದೆ.

ಕಳೆದ ಎರಡು ದಿನಗಳಿಂದ ಮಳೆ ಆರಂಭಗೊಂಡಿದ್ದು, ನೀರು ತುಂಬಿಕೊಂಡಲ್ಲಿ ಭಾರೀ ಅಪಾಯಕ್ಕೆ ಕಾರಣವಾಗಬುದಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಹೊಂಡವನ್ನು ಮುಚ್ಚಿ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *