ಕಾಸರಗೋಡು: ದೇಲಂಪಾಡಿ ಮಯ್ಯಾಳಬಾವ ತರವಾಡಿನ ಬಾಬು ಪೂಜಾರಿ(74 ವ) ಡಿ.31ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ದೇಲಂಪಾಡಿ ಸಿಪಿಎಂ ಲೋಕಲ್ ಕಮಿಟಿ ಮಾಜಿ ಸಕ್ರೆಟರಿಯಾಗಿ, ಏರಿಯಾ ಕಮಿಟಿ ಸದಸ್ಯರಾಗಿ, ಮಯ್ಯಾಳ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿ ಮಾಜಿ ಉಪಾಧ್ಯಕ್ಷರಾಗಿ ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು.


ಮೃತರು ಪತ್ನಿ ಲೀಲಾವತಿ, ಪುತ್ರರಾದ ರವಿ ಮಯ್ಯಾಳ, ಸತೀಶ್ ಮಯ್ಯಾಳ, ಪುತ್ರಿಯರಾದ ಪುಷ್ಪಾಲತ, ವಿಜಯ, ಶಾಲಿನಿ ಸೇರಿದಂತೆ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು , ಬಂಧು ಬಳಗ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.




