ಉಡುಪಿ: ಲೀಸ್ ಅವಧಿ ಮುಗಿಯದಿದ್ದರೂ ಕಟ್ಟಡ ಮಾಲಕಿಯಿಂದ ಜೀವ ಬೆದರಿಕೆ; ನನಗೆ ಮತ್ತು ಸಿಬ್ಬಂದಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ: ಲಾಡ್ಜ್ ಮಾಲೀಕ ದಿನೇಶ್‌ ಶೆಟ್ಟಿ ಅಳಲು

Share with

ಉಡುಪಿ: 2021ರಿಂದ ಮಮತಾ ಶೆಟ್ಟಿ ಎಂಬವರ ಶಾಂಭವಿ ಲಾಡ್ಜ್ ನಡೆಸಲು ನಾನು ಲೀಸ್ ಗೆ ಪಡೆದುಕೊಂಡಿದ್ದೇನೆ. ಅದರಂತೆ ಸರಿಯಾಗಿ ಬಾಡಿಗೆಯನ್ನು ನೀಡುತ್ತಿದ್ದೇನೆ. ಆದರೆ ಇದೀಗ ಅವರು ತಮ್ಮ ಪುತ್ರನ ಜೊತೆ ಸೇರಿ ಮಾನಸಿಕ ಕಿರುಕುಳ ನೀಡುತ್ತಿದ್ದು, ಭೂಗತ ವ್ಯಕ್ತಿಗಳಿಂದ ಬೆದರಿಕೆ ಹಾಕಿಸುತ್ತಿದ್ದಾರೆ ಎಂದು ದಿನೇಶ್‌ ಶೆಟ್ಟಿ ದೂರಿದ್ದಾರೆ.

ಕಟ್ಟಡ ಮಾಲಕಿ ಭೂಗತ ವ್ಯಕ್ತಿಗಳಿಂದ ಬೆದರಿಕೆ ಹಾಕಿಸುತ್ತಿದ್ದಾರೆ ಎಂದು ದಿನೇಶ್‌ ಶೆಟ್ಟಿ ದೂರಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಇತ್ತೀಚೆಗೆ ಮಮತಾ ಶೆಟ್ಟಿ ತಮ್ಮ ಬಳಿ ಬಂದು ಅವರ ಬಾರ್ ನಡೆಸಲು ಕೇಳಿದ್ದರು. ಆದರೆ ನಾನು ಆಗುವುದಿಲ್ಲ ಎಂದು ಹೇಳಿದ್ದೆ. ಇದೇ ಸಿಟ್ಟಿನಲ್ಲಿ ಅವರು ತಮ್ಮ ಮಗನ ಜೊತೆ ಹೊಟೇಲಿಗೆ ಅಕ್ರಮವಾಗಿ ಪ್ರವೇಶಿಸಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ.

ಹೊಟೇಲಿನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ನನ್ನ ವಿರುದ್ಧ ಸುಳ್ಳು ವದಂತಿ ಹಬ್ಬಿಸಿದ್ದಾರೆ. ಸಿಸಿಟಿವಿ ದೃಶ್ಯವಾಳಿಗಳನ್ನು ತಿರುಚಿ ನನ್ನ ವಿರುದ್ಧ ಆಕೆ ಮತ್ತು ಆಕೆಯ ಮಗನಿಗೆ ಹಲ್ಲೆ ಮಾಡಿದ್ದೇನೆಂದು ಸುಳ್ಳು ದೂರು ಕೊಟ್ಟಿದ್ದಾರೆ. ನಾನು ಈ ಬಗ್ಗೆ ದೂರು ನೀಡಿದ್ದು ನನಗೆ ನ್ಯಾಯ ಬೇಕು ಎಂದು ದಿನೇಶ್ ಶೆಟ್ಟಿ ಅಳಲು ತೋಡಿಕೊಂಡಿದ್ದಾರೆ.


Share with

Leave a Reply

Your email address will not be published. Required fields are marked *