ಮಂಜೇಶ್ವರ: ಜಿ.ಯಂ.ಯಲ್.ಪಿ ಉದ್ಯಾವರ ತೋಟ ಶಾಲೆಯ 1ನೇ ಮತ್ತು 2ನೇ ತರಗತಿಯ ಮಕ್ಕಳ ದಿನಚರಿ ಬರವಣಿಗೆಯ “ಸಂಯುಕ್ತ ಡೈರಿ” ಬಿಡುಗಡೆ ಸಮಾರಂಭವು ನಡೆಯಿತು.


ಶಾಲಾ ಮುಖ್ಯೋಪಾಧ್ಯಾಯನಿ ಹರಿಣಾಕ್ಷಿ ಟೀಚರ್ ಸ್ವಾಗತಿಸಿದರು. ಸಭೆಯ ಉದ್ಘಾಟನೆಯನ್ನು ಮಂಜೇಶ್ವರ ಪಿ. ಇ. ಸಿ. ಸೆಕ್ರೆಟರಿ ಹಾಗೂ ಉದ್ಯಾವರ ಗೇಟ್ ಶಾಲೆಯ ಮುಖ್ಯ ಶಿಕ್ಷಕರಾದ ಶಂಕರ ನಾರಾಯಣ ಭಟ್ ವಹಿಸಿದ್ದರು. ಮಂಜೇಶ್ವರ ಸಿ. ಆರ್.ಸಿ.ಕೋ ಆರ್ಡಿನೇಟರ್ ಶೈಲಜಾ ಟೀಚರ್ ಅಧ್ಯಕ್ಷತೆ ವಹಿಸಿದರು.
ಸಭೆಯಲ್ಲಿ ಶಾಲಾ ಶಿಕ್ಷಕಿಯರಾದ ಗಾಯತ್ರಿ ಹಾಗೂ ಐಶ್ರ್ಯ ಮಕ್ಕಳನ್ನುದ್ದೇಶಿಸಿ ಮಾತನಾಡಿದರು. ಬಬಿತಾ ಟೀಚರ ಧನ್ಯವಾದ ನೀಡಿದರು




