ಮಂಜೇಶ್ವರ: ಉದ್ಯಾವರ ತೋಟ ಶಾಲೆಯ ಮಕ್ಕಳಿಂದ ಕೃಷಿ ಕ್ಷೇತ್ರ ಸಂದರ್ಶನ

Share with

ಮಂಜೇಶ್ವರ: ಜಿ.ಎಂ.ಎಲ್.ಪಿ ಉದ್ಯಾವರ ತೋಟ ಶಾಲೆಯ ಮಕ್ಕಳ ಪರಿಸರ ಪಠಣ ಫಲಪ್ರದವಾದ ಕಲಿಕೆಗಾಗಿ ‘ಕೃಷಿ ಕ್ಷೇತ್ರಕ್ಕೆ ಸಂದರ್ಶನ ‘ಎಂಬ ವಿಷಯದಂಗವಾಗಿ ಹಮ್ಮಿಕೊಂಡ ಬಯಲು ಪ್ರವಾಸವನ್ನು ಪ್ರಸ್ತುತ ಶಾಲೆಯ 2ನೇ ತರಗತಿಯ ಮೊಹಮ್ಮದ್ ಜಲಾಲುದ್ದೀನ್ ಎಂಬ ವಿದ್ಯಾರ್ಥಿ ಮನೆಗೆ ಭೇಟಿ ನೀಡಲಾಯಿತು.

ಜಿ.ಎಂ.ಎಲ್.ಪಿ ಉದ್ಯಾವರ ತೋಟ ಶಾಲೆಯ ಮಕ್ಕಳು

ಅವರ ರಕ್ಷಕರಾದ ಮೊಹಮ್ಮದ್ ಅಸ್ರಾ ಹಾಗೂ ಅವರ ಕುಟುಂಬದವರು ತಮ್ಮ ಮನೆಯಂಗಳದಲ್ಲಿ ಹಾಗೂ ಟೆರೆಸ್ ಮೇಲೆ ಬಕೆಟ್ ಚಟ್ಟಿ ಹಾಗೂ ಗೋಣಿ ಚೀಲದಲ್ಲಿ ಬೆಳೆಸಿರುವ ಹಣ್ಣು ತರಕಾರಿ ಹಾಗೂ ವಾಣಿಜ್ಯ ಬೆಳೆಗಳನ್ನು ನಿರೀಕ್ಷಿಸಲಾಯಿತು.

ಮೋಹಮ್ಮದ್ ಅಸ್ರಾರವರು ಉದ್ಯಾವರ ಮಾಡ ನಿವಾಸಿಯಾಗಿದ್ದು ಕೃಷಿ ಕೆಲಸದಲ್ಲಿ ತುಂಬಾ ಆಸಕ್ತಿ ಉಳ್ಳವರಾಗಿದ್ದಾರೆ. ಅವರು ಕೃಷಿ ಪರಂಪರೆಯನ್ನು ತಾನು ತೊಡಗಿಸಿಕೊಂಡು ಅವರ ಮುಂದಿನ ಪೀಳಿಗೆಗೆ ಕೂಡ ಕೃಷಿಯ ಮಹತ್ವವನ್ನು ತಿಳಿಸಿ ಕೊಡುವಂತಹ ಮಹತ್ವದ ಕಾರ್ಯವನ್ನು ಮಾಡುತ್ತಿದ್ದಾರೆ.

ಈ ಶಾಲಾ ವಿದ್ಯಾರ್ಥಿಗಳು ತಮ್ಮ ಮನೆಗೆ ಭೇಟಿ ನೀಡಿದ ವೇಳೆ ಮಕ್ಕಳಿಗೆ ಕೃಷಿಯ ಬಗ್ಗೆ ಸೂಕ್ತ ಮಾಹಿತಿ ಕೊಟ್ಟು ಸಹಕರಿಸಿದಕ್ಕಾಗಿ ಶಾಲಾ ಪರವಾಗಿ ಹಾಗೂ ರಕ್ಷಕ-ಶಿಕ್ಷಕ ಸಂಘದ ಪರವಾಗಿ ಶಾಲಾ ಮುಖ್ಯೋಪಾಧ್ಯಾಯನಿ ಹರಿಣಾಕ್ಷಿ ಟೀಚರ್ ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸಿದರು.


Share with

Leave a Reply

Your email address will not be published. Required fields are marked *