ಯುವತಿಗೆ ಲೈಂಗಿಕ ಕಿರುಕುಳಕ್ಕೆ ಯತ್ನ!

Share with

ಲೈಂಗಿಕ ಕಿರುಕುಳಕ್ಕೆ ಯತ್ನ.

ಬಂಟ್ವಾಳ: ಮನೆಯೊಂದರ ಕೋಣೆಯ ಕಿಟಕಿ ತೆಗೆದು ಯುವತಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಘಟನೆ ಬಾಳ್ತಿಲದಲ್ಲಿ ನಡೆದಿದ್ದು, ಈ ಬಗ್ಗೆ ಯುವತಿಯು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಕಲ್ಲಡ್ಕ ಸಮೀಪದ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಎಂಬಲ್ಲಿ ಸೆ.20 ರಂದು ರಾತ್ರಿ 10 ಗಂಟೆಯ ಬಳಿಕ ಈ ಘಟನೆ ನಡೆದಿದ್ದು, ಸ್ಥಳೀಯ ನಿವಾಸಿಯಾದ ವಿಶ್ವನಾಥ ಎಂಬವನು ಮನೆಯ ಕೋಣೆಯ ಕಿಟಕಿಯ ಪರದೆ ಸರಿಸಿ ಕಿಟಕಿ ಮೂಲಕ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಇಣುಕಿ ನೋಡುತ್ತಿದ್ದು, ಇದನ್ನು ಗಮನಿಸಿದ ದೂರುದಾರರು ಜೋರಾಗಿ ಕಿರುಚಿದಾಗ ಅಲ್ಲಿಂದ ಓಡಿ ಹೋಗಿದ್ದಾನೆ ಎಂದು ತಿಳಿಸಲಾಗಿದೆ.

ದೂರುದಾರರ ತಂದೆಯು ನಿಧನ ಹೊಂದಿದ್ದು, ಮನೆಯಲ್ಲಿ ತಾಯಿ ಮತ್ತು ಮೂವರು ಹೆಣ್ಣು ಮಕ್ಕಳು ಮಾತ್ರ ನೆಲೆಸಿದ್ದು, ಮನೆಯಲ್ಲಿ ಮಹಿಳೆಯರೇ ಇರುವ ಕಾರಣ ಈತ ರಾತ್ರಿ ವೇಳೆ ಲೈಂಗಿಕ ಕಿರುಕುಳ ನೀಡಲು ಬಂದಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಈತನನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸ್ಥಳೀಯರು ಮನವಿಯನ್ನು ಮಾಡಿದ್ದಾರೆ ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *