ಬೆಂಗಳೂರು: ಬಿಗ್ ಬಾಸ್ ಕನ್ನಡ -11(Bigg Boss Kannada-11) ರ ಬಹು ನಿರೀಕ್ಷಿತ ಪ್ರೋಮೊ ರಿಲೀಸ್ ಆಗಿದೆ.
ಜನರೆಲ್ಲರೂ ಆಫೀಸ್, ಮನೆ, ರಸ್ತೆ, ಅಂಗಡಿಗಳಲ್ಲಿ ಟಿವಿ ನೋಡುವ ದೃಶ್ಯದಂತೆ ಬಿಗ್ ಬಾಸ್ ಪ್ರೋಮೋ ಶುರುವಾಗಿ, “ಇದು ಬಿಗ್ ಬಾಸ್.. ನಮಸ್ಕಾರ ಕರ್ನಾಟಕ ಹೇಗಿದ್ದೀರಾ? ಕಳೆದ ಹತ್ತು ವರ್ಷದಿಂದ ನೋಡ್ತಾನೆ ಇದ್ದೀರಾ. ಇದು ದೊಡ್ಡದಾಗ್ತಾನೇ ಇದೆ. ಈ ಬಾರಿ ಇನ್ನೂ ದೊಡ್ಡದು ಕಾದಿದೆ. ಇದು ಹೊಸ ದಶಕ, ಹೊಸ ಆಟ ಹಾಗೂ ಹೊಸ ಅಧ್ಯಾಯ. ಹಾಗಾದ್ರೆ ಆ್ಯಂಕರ್ ಕೂಡ ಹೊಸಬರಾ..? ಎಂದು ಹೇಳುತ್ತಾ ಪ್ರೋಮೊ ಮುಕ್ತಾಯವಾಗಿದೆ.
ಈ ಬಾರಿ ಕಿಚ್ಚ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮ ನಡೆಸುವುದು ಅನುಮಾನ ಎನ್ನುವ ಮಾತು ಒಂದು ಕಡೆ ಕೇಳಿ ಬರುತ್ತಿದೆ. ಇನ್ನೊಂದು ಕಡೆ ಕಿಚ್ಚನೇ ಶೋ ನಡೆಸಿ ಕೊಡುತ್ತಾರೆ ಎನ್ನಲಾಗುತ್ತಿದೆ. ಈ ನಡುವೆ ಹೈದರಾಬಾದ್ ನಲ್ಲಿ ಬಿಗ್ ಬಾಸ್ ಶೋ ನ ಆ್ಯಂಕರ್ ಫೇಸ್ ಪ್ರೋಮೊ ಶೂಟ್ ಆಗಿದೆ ಎನ್ನಲಾಗುತ್ತಿದೆ.