SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್, ವಿದ್ಯಾರ್ಥಿನಿ ಹೇಳಿದ್ದೇನು?

Share with

ಮೈಸೂರು, (ಏಪ್ರಿಲ್ 23): 2025-26ನೇ ಸಾಲಿನ ಕರ್ನಾಟಕ SSLC ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆ ಬರೆದಿದ್ದ 7,70,209 ಮಕ್ಕಳ ಪೈಕಿ 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆ ಮೂಲಕ ಈ ವರ್ಷ ಎಸ್ಎಸ್ಎಲ್ಸಿಯಲ್ಲಿ ಶೇ.94.1ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಇದರಲ್ಲಿ ಮೈಸೂರಿನ ವಿದ್ಯಾರ್ಥಿನಿ ಕೇವಲ ಒಂದು ಅಂಕದಿಂದ ಔಟ್ ಆಫ್ ಔಟ್ ಮಿಸ್ ಮಾಡಿಕೊಂಡಿದ್ದಾಳೆ. ಹೌದು.. ಮೈಸೂರಿನ ಸರಸ್ವತಿಪುರಂನಲ್ಲಿರುವ ವಿಜಯ ವಿಠ್ಠಲ್ ವಿದ್ಯಾ ಸಂಸ್ಥೆ ವಿದ್ಯಾರ್ಥಿನಿ ಮನಸ್ವಿನಿ ಪ್ರದೀಪ್‌ 625 ಕ್ಕೆ 624 ಅಂಕ ಪಡೆದುಕೊಂಡಿದ್ದಾರೆ. ಎಲ್ಲಾ ವಿಷಯದಲ್ಲೂ ಔಟ್ ಆಫ್ ಔಟ್ ತೆಗೆದಿದ್ದಾಳೆ. ಆದ್ರೆ, ವಿಜ್ಞಾನದಲ್ಲಿ ಕೇವಲ 1 ಅಂಕ ಕಡಿಮೆಯಾಗಿದೆ. ಇದರಿಂದ ಔಟ್ ಆಫ್ ಔಟ್ನಿಂದ ವಂಚಿತಳಾಗಿದ್ದಾಳೆ. ಇನ್ನು ಈ ಬಗ್ಗೆ ಮಾತನಾಡಿರುವ ಮನಸ್ವಿನಿ ಸಂತಸ ಜೊತೆಗೆ ಕೇವಲ ಒಂದು ಅಂಕ ಕಡಿಮೆಯಾಗಿರುವುದಕ್ಕೆ ಕೊಂಚ ಬೇಸರ ಹೊರಹಾಕಿದ್ದಾಳೆ.


Share with

Leave a Reply

Your email address will not be published. Required fields are marked *