Karnataka SSLC Results 2026 Live: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ, ಯಾವ ಜಿಲ್ಲೆಗೆ ಎಷ್ಟು ಫಲಿತಾಂಶ?

Share with

ಕರ್ನಾಟಕದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯ ಫಲಿತಾಂಶ ಇಂದು ಮಧ್ಯಾಹ್ನ 12 ಗಂಟೆಗೆ ಪ್ರಕಟಗೊಂಡಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ನಡೆದಿದ್ದ ಈ ಪರೀಕ್ಷೆಗೆ ರಾಜ್ಯಾದ್ಯಂತ ಸುಮಾರು 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಂಡಿದೆ. ಇಂದು 12ಗಂಟೆಗೆ ಶಿಕ್ಷಣ ಸಚಿವರು ಅಧಿಕೃತವಾಗಿ ಫಲಿತಾಂಶ ಬಿಡುಗಡೆ ಮಾಡಿದ್ದಾರೆ.

ಈ ಎರಡು ವೆಬ್‌ಸೈಟ್‌ಗಳಲ್ಲಿ ವಿದ್ಯಾರ್ಥಿಗಳು (Registration Number) ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಫಲಿತಾಂಶ ವೀಕ್ಷಿಸಬಹುದು. ಇಷ್ಟೇ ಅಲ್ಲದೇ, ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಮೊಬೈಲ್ ಸಂಖ್ಯೆಗಳಿಗೂ ಎಸ್‌ಎಂಎಸ್‌ (SMS) ಮೂಲಕ ಫಲಿತಾಂಶ ಕಳುಹಿಸಲು ಶಿಕ್ಷಣ ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ.

2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಲಿಸ್ಟ್‌ನಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಕೂಡ ಇದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಸರಕಾರಿ ಶಾಲೆಯ ವಿಧ್ಯಾರ್ಥಿನಿ ಪ್ರಾರ್ಥನಾ ಬಿರಾದರ ಪಾಟೀಲ್‌ ಸಾಧನೆಗೈದಿದ್ದಾರೆ. 625/625 ಅಂಕ ಪಡೆದು ರಾಜ್ಯದಲ್ಲಿ ಅಗ್ರ ಸ್ಥಾನ ಪಡೆದ ಗ್ರಾಮೀಣ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಪ್ರತಿಭೆ.

ಬಾಗಲಕೋಟೆ: 95.42
ಬಳ್ಳಾರಿ: 93.35
ಬೆಳಗಾವಿ: 94.75
ಬೆಂಗಳೂರು ಉತ್ತರ: 95.33
ಬೆಂಗಳೂರು ಗ್ರಾಮಾಂತರ: 95.83
ಬೆಂಗಳೂರು ದಕ್ಷಿಣ: 91.64
ಬೀದರ್: 92.17
ಚಾಮರಾಜನಗರ: 91.89

ಚಿಕ್ಕಬಳ್ಳಾಪುರ: 90.88
ಚಿಕ್ಕಮಗಳೂರು: 94.99
ಚಿಕ್ಕೋಡಿ: 94.09
ಚಿತ್ರದುರ್ಗ: 92.25

ದಕ್ಷಿಣ ಕನ್ನಡ: 98.4
ದಾವಣಗೆರೆ: 94.64
ಧಾರವಾಡ: 95.59
ಗದಗ: 95.24
ಹಾಸನ: 97.51
ಹಾವೇರಿ: 96.87
ಕಲಬುರಗಿ: 85.06
ಕೊಡಗು: 96.68

ಕೋಲಾರ: 95.5
ಕೊಪ್ಪಳ: 93.1
ಮಧುಗಿರಿ: 90.24
ಮಂಡ್ಯ: 97.45
ಮೈಸೂರು: 94.45
ರಾಯಚೂರು: 94.41
ರಾಮನಗರ: 92.83
ಶಿವಮೊಗ್ಗ: 96.56
ಶಿರಸಿ: 97.21
ತುಮಕೂರು: 92.04
ಉಡುಪಿ: 98.18
ಉತ್ತರ ಕನ್ನಡ: 98.09
ವಿಜಯನಗರ: 96.39
ವಿಜಯಪುರ: 94.16
ಯಾದಗಿರಿ : 91.89

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026 ಅನ್ನು ಡಿಜಿಲಾಕ‌ರ್ ಮೂಲಕವೂ ಲಭ್ಯವಾಗುತ್ತಿದೆ.


Share with

Leave a Reply

Your email address will not be published. Required fields are marked *