ಮಂಜೇಶ್ವರ: ಹೊಸಂಗಡಿ ಬಳಿಯ ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನ ಬಳಿಯ ನಿವಾಸಿ ಕೋಟೆಮನೆ ಎಂ. ವೆಂಕಟರಮಣ ಆಚಾರ್ಯ (101) ಪ್ರಯಾಪ್ರಬುದ್ಧರಾಗಿ, ಅಲ್ಪಾವಧಿಯ ಅಸೌಖ್ಯದಿಂದ ಇಂದು ಮುಂಜಾನೆ 5 ಗಂಟೆಗೆ ಸ್ವ – ಗೃಹದಲ್ಲಿ ನಿಧನರಾದರು.

ಮೃತರು ಕಳೆದ 70 ವರ್ಷಗಳಿಂದ ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಸ್ಥಾನದ ರಥಬೀದಿಯಲ್ಲಿ “ಶ್ರೀ ವಿಶ್ವಕರ್ಮ ಫರ್ನಿಚರ್” ಎಂಬ ಸಂಸ್ಥೆಯನ್ನು ಹೊಂದಿ, ಬಡಗಿ ವೃತ್ತಿಯಲ್ಲಿ ಜನಾನುರಾಗಿದ್ದರು. ಅಲ್ಲದೇ ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದ ಆಡಳಿತ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಜೀವನದ ಸಾರ್ಥಕ 100 ವರ್ಷವನ್ನು ಪೂರೈಸಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಜನುಮದಿನದ ಶತಮಾನೋತ್ಸವವನ್ನು ವಿಶೇಷ ಕಾರ್ಯಕ್ರಮಗಳೊಂದಿಗೆ ಆಚರಿಸಿದ್ದರು. ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ನ ಹಿರಿಯ ಸದಸ್ಯರಾಗಿದ್ದರಿಂದ ಬ್ಯಾಂಕ್ ನ ಆಡಳಿತ ಮಂಡಳಿಯಿಂದ ಮನೆಯಲ್ಲಿ ಸನ್ಮಾನವನ್ನು ಸ್ವೀಕರಿಸಿದ್ದರು.
ಮೃತರು ಮಕ್ಕಳಾದ ಹರಿಶ್ಚಂದ್ರ ಆಚಾರ್ಯ, ಪಾಂಡುರಂಗ ಆಚಾರ್ಯ ಪುತ್ತೂರು, ಗೀತಾ, ಲತಾ, ಪ್ರಭಾ, ಚಿತ್ರ, ಜ್ಯೋತಿ, ಅಳಿಯಂದಿರಾದ: ದಿನೇಶ್ ಆಚಾರ್ಯ ಕಾಸರಗೋಡು, ಬಾಲಕೃಷ್ಣ ಆಚಾರ್ಯ ಕೋಟೆಕಾರು, ರಾಧಾಕೃಷ್ಣ ಆಚಾರ್ಯ ಕೊಯಂಬತ್ತೂರು, ಹೇಮಚಂದ್ರ ಆಚಾರ್ಯ ಕೋಟೆಕಾರು, ಸೊಸೆಯಂದಿರಾದ: ಕಲಾಶ್ರೀ, ಕಾಂಚನ, ಸಹೋದರ: ನೀಲಯ್ಯ ಆಚಾರ್ಯ ಅಂಬಾರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಪತ್ನಿ: ಶಾರದಾ, ಹಾಗೂ ಅಳಿಯ: ಸುಬ್ರಹ್ಮಣ್ಯ ಆಚಾರ್ಯ ಮುಳ್ಳೇರಿಯಾ ಈ ಹಿಂದೆ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಅಪರಾಹ್ನ 3 ಗಂಟೆಗೆ ರಾಮತ್ತಮಜಾಲಿನ ಸಾರ್ವಜನಿಕ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಮೃತರ ನಿಧನಕ್ಕೆ: ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದ ಆಡಳಿತ ಸಮಿತಿ, ಮಹಿಳಾ ಸಂಘ, ಗುರು ಸೇವಾ ಪರಿಷತ್, ಮಂಜೇಶ್ವರ ಸರ್ವಿಸ್ ಕೋ ಆಪರೇಟಿವ್ ಬ್ಯಾಂಕ್ ನ ಆಡಳಿತ ಮಂಡಳಿ ಗಾಢವಾದ ಸಂತಾಪ ಸೂಚಿಸಿದ್ದಾರೆ.




