ಮುಜಾಫರ್‌ನಗರ: ಉತ್ತರ ಪ್ರದೇಶದ ತ್ವರಿತ ನ್ಯಾಯಾಲಯದ ನ್ಯಾಯಾಧೀಶರೊಬ್ಬರು 4 ತಿಂಗಳಲ್ಲಿ 10 ಪ್ರತ್ಯೇಕ ಪ್ರಕರಣಗಳಲ್ಲಿ 22 ವ್ಯಕ್ತಿಗಳಿಗೆ ಮರಣ ದಂಡನೆ ವಿಧಿಸಿ ತೀರ್ಪು ನೀಡಿದ್ದಾರೆ.

ಮುಜಾಫರ್‌ನಗರದ ಜಿಲ್ಲಾ ನ್ಯಾ. ರವಿಕುಮಾರ್ ದಿವಾಕರ್ ಅವರೇ ಈ ಜಡ್ಜ್. 2026ರ ಏ.6ರಂದು ನಡೆದ ವಕೀಲ ಸಮೀರ್ ಸಾಫಿ ಹತ್ಯೆ ಸಂಬಂಧ ಮೂವರಿಗೆ, ಏ.28ರಂದು ನಾಲ್ವರಿಗೆ, ಮೇ 20ರಂದು ಓರ್ವ ವ್ಯಕ್ತಿಗೆ, ಜೂ.20ರಂದು ಇಬ್ಬರಿಗೆ, ಜು.2ರಂದು ಒಬ್ಬರಿಗೆ, ಜು.6ರಂದು ಇಬ್ಬರಿಗೆ ಮತ್ತು ಜು.17ರಂದು ನಾಲ್ವರಿಗೆ ಮತ್ತು ಆ.12ರಂದು ಒಬ್ಬರಿಗೆ, ಆ.13ರಂದು ನಾಲ್ವರಿಗೆ ಮರಣ ದಂಡನೆ ವಿಧಿಸಿ ತೀರ್ಪು ನೀಡಿದ್ದಾರೆ.
ಇದೇ ನ್ಯಾಯಾಧೀಶರು 2022ರಲ್ಲಿ ವಾರಾಣಸಿಯ ಜ್ಞಾನವ್ಯಾಪಿ ಸಂಕೀರ್ಣದಲ್ಲಿ ವಿಡಿಯೋ ಸಮೀಕ್ಷೆ ನೀಡುವಂತೆ ಮಹತ್ವದ ತೀರ್ಪು ನೀಡಿದ್ದರು.




