ತಮ್ಮ ಪುತ್ರಿ ಓಡಿಹೋಗಿ ಬೇರೆ ಧರ್ಮದ ಯುವಕನನ್ನು ಮದುವೆಯಾಗಿದ್ದು, ಇದನ್ನು ಸಹಿಸಲಾಗದ ಕುಟುಂಬವೊಂದು ಆಕೆ ಬದುಕಿರುವಾಗಲೇ ಶ್ರಾದ್ಧ ಮಾಡಿ ಮುಗಿಸಿದೆ. ಯುವತಿಯ ಚಿಕ್ಕಪ್ಪ ಮತ್ತು ಚಿಕ್ಕಮ್ಮನ ಮುಂದಾಳತ್ವದಲ್ಲಿ ನಾಡಿಯಾದ ಕೃಷ್ಣಗಂಜ್‌ನ ಶಿಬ್ನಿಬಾಸ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಶ್ರಾದ್ಧ ಕಾರ್ಯಕ್ರಮ ನಡೆದಿದೆ.
ಯುವತಿಯ ಕುಟುಂಬದ ಈ ನಿರ್ಧಾರ ಕಂಡ ನೆರೆಹೊರೆಯವರು, ಆಚ್ಚರಿ ಜೊತೆಗೆ ಅನುಕಂಪ ಕೂಡ ವ್ಯಕ್ತಪಡಿಸಿದ್ದಾರೆ. ಎರಡನೇ ವರ್ಷದ ಪಿಯುಸಿ ಓದುತ್ತಿದ್ದ ಯುವತಿ, ಇತ್ತೀಚೆಗೆ ನಾಡಿಯಾದ ಹನ್ಸ್‌ಖಾಲಿ ಘಜ್ನಾ ಪ್ರದೇಶದ ಯುವಕನೊಂದಿಗೆ ಓಡಿಹೋಗಿ ಮದುವೆಯಾಗಿದ್ದಳು. ಇದನ್ನು ಸಹಿಸಲಾಗದ ಕುಟುಂಬ, ಆಕೆ ಮದುವೆಯಾದ 12 ದಿನಗಳ ನಂತರ ತಮ್ಮ ಮಗಳು ನಮ್ಮ ಪಾಲಿಗೆ ಇಲ್ಲವೆಂದು ತಿಳಿದು ಶ್ರಾದ್ಧ ಮಾಡಿದೆ.

ಯುವತಿಯ ಚಿಕ್ಕಮ್ಮಳ ಅಳಲು: ನಮಗೆ ಗೊತ್ತಿಲ್ಲದಂತೆ ನಮ್ಮ ಮಗಳು ಬೇರೆ ಧರ್ಮದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಸುದ್ದಿ ತಿಳಿದು ಬೇಸರ ತರಿಸಿದೆ. ಈ ಹಿಂದೆಯೂ ಆಕೆ ಇದೇ ರೀತಿ ಇದೇ ಯುವಕನೊಂದಿಗೆ ಓಡಿ ಹೋಗಿದ್ದಳು. ತಿಳಿ ಹೇಳಿ ಕರೆತರಲಾಗಿತ್ತು. ಅಲ್ಲದೇ, ನಾವು ನಮ್ಮ ಮಗಳ ಮದುವೆಯನ್ನು ಬೇರೆ ವ್ಯಕ್ತಿಯ ಜೊತೆಗೆ ಮಾಡಲು ಸಿದ್ಧತೆ ನಡೆಸಿದ್ದೆವು. ನಮ್ಮ ಪ್ರೀತಿ ಮತ್ತು ವಿಶ್ವಾಸ ಅಲ್ಲಗಳೆದು, ಕುಟುಂಬದ ಅನುಮತಿಯಿಲ್ಲದೇ ಓಡಿಹೋಗಿ ಇದೀಗ ಮದುವೆಯಾಗಿದ್ದಾಳೆ. ಈ ಮೂಲಕ ನಮ್ಮ ನಂಬಿಕೆಗೆ ದ್ರೋಹ ಬಗೆದಿದ್ದಾಳೆ. ಈ ಬಾರಿ ನಾವು ಅವಳನ್ನು ಹಿಂತಿರುಗಿಸುವುದಿಲ್ಲ. ಅವಳು ಇನ್ನು ಮುಂದೆ ನನ್ನ ಮಗಳಲ್ಲ. ನಮ್ಮ ಪಾಲಿಗೆ ಸತ್ತು ಹೋಗಿದ್ದಾಳೆಂದು ತಿಳಿದಕೊಂಡು ಆಕೆಯ ಅಂತ್ಯಕ್ರಿಯೆಯನ್ನು ಮಾಡುತ್ತಿದ್ದೇವೆ ಎಂದು ಯುವತಿಯ ಚಿಕ್ಕಮ್ಮ ತುಂಪಾ ಬಿಸ್ವಾಸ್ ಅಳಲು ತೋಡಿಕೊಂಡಿದ್ದಾರೆ.
ಯುವತಿಯ ಚಿಕ್ಕಪ್ಪನ ಬೇಸರ: ಯುವತಿಯ ತಂದೆ ಕೆಲಸದ ಕಾರಣದಿಂದಾಗಿ ಇಸ್ರೇಲ್‌ನಲ್ಲಿದ್ದು, ತಮ್ಮ ಮಗಳ ಈ ನಿರ್ಧಾರದಿಂದ ಮಾನಸಿಕವಾಗಿ ಬಹಳ ನೊಂದುಕೊಂಡಿದ್ದಾರೆ. ಇರಾನ್ – ಇಸ್ರೇಲ್ ಸಂಘರ್ಷದಿಂದಾಗಿ ಅವರು ಮನೆಗೆ ಮರಳಲು ಸಾಧ್ಯವಾಗುತ್ತಿಲ್ಲ. ಅವರ ಅನುಪಸ್ಥಿತಿಯಲ್ಲಿ, ಆಕೆಯ ಅಂತ್ಯಕ್ರಿಯೆಯನ್ನು ಮಾಡುತ್ತಿದ್ದೇವೆ. ಪಾದ್ರಿಯನ್ನು ಕರೆದು ಧಾರ್ಮಿಕ ನಿಯಮಗಳ ಪ್ರಕಾರವೇ ಅವಳ ಫೋಟೋಗೆ ಹಾರ ಹಾಕಿ ಅಂತ್ಯಕ್ರಿಯೆಯನ್ನು ಮಾಡಿದ್ದೇವೆ. ಆಕೆ ನಮ್ಮ ಪ್ರೀತಿ ಮತ್ತು ಗೌರವವನ್ನು ಅರ್ಥಮಾಡಿಕೊಳ್ಳಲಿಲ್ಲ. ಅವಳು ನಮ್ಮ ಮಗಳಲ್ಲ. ಆಕೆಯ ಎಲ್ಲಾ ಫೋಟೋ, ಬಟ್ಟೆ, ಪುಸ್ತಕ ಸೇರಿದಂತೆ ಎಲ್ಲವನ್ನೂ ಬೆಂಕಿಯಲ್ಲಿ ಆಕೆಯ ಅಂತ್ಯಕ್ರಿಯೆಯ ಜೊತೆಗೆ ಸುಟ್ಟು ಹೋಗಿವೆ. ಆಕೆಯ ನೆನಪಿನ ಎಲ್ಲ ಕುರುಹುಗಳನ್ನು ಅಳಿಸಿಹಾಕಲಾಯಿತು ಎಂದು ಯುವತಿಯ ಚಿಕ್ಕಪ್ಪ ಸೋಮನಾಥ್ ಬಿಸ್ವಾಸ್ ಬೇಸರ ವ್ಯಕ್ತಪಡಿಸಿದರು.
ಪುತ್ರಿ ಮದುವೆಯಾದ 12 ದಿನಗಳ ಬಳಿಕ ಆಕೆಯ ಜೀವಂತ ಶ್ರಾದ್ಧ ಮಾಡಿರುವ ಕುಟುಂಬದ ನಿರ್ಧಾರಕ್ಕೆ ಕೆಲವರು ಬೆಂಬಲ ಸೂಚಿಸಿದರೆ, ಇನ್ನು ಕೆಲವರು ಸೂಚಿಸದಿರುವುದು ಕಂಡು ಬಂದಿದೆ. ಘಟನೆ ಬಳಿಕ ಈ ಮಾಹಿತಿ ಗೊತ್ತಾಯಿತು. ಆದರೆ, ಈ ವಿಷಯದಲ್ಲಿ ಯಾರಿಂದಲೂ ಯಾವುದೇ ದೂರು ದಾಖಲಾಗಿಲ್ಲ. ಹುಡುಗಿ ವಯಸ್ಕಳಾಗಿರುವುದರಿಂದ, ನಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಪುತ್ರಿ ಜೀವಂತದ ಹೊರತು ಶ್ರಾದ್ಧ ಮಾಡಿರುವುದು ಎಷ್ಟು ಸರಿ ಅನ್ನೋದನ್ನು ಆ ಕುಟುಂಬ ಯೋಚಿಸಬೇಕೆಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.