ಬಂಗಾಳದಲ್ಲಿ ಅಧಿಕಾರ ಸ್ಥಾಪಿಸುವತ್ತ ಬಿಜೆಪಿ..!! ಸೋಲಿನ ಸುಳಿಯಲ್ಲಿ ದೀದಿ..!

Share with

ಕೋಲ್ಕತಾ: ಹಲವು ಸಮೀಕ್ಷೆಗಳ ಫಲಿತಾಂಶದಂತೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರ ಸಾಧಿಸುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ. ಮತ ಎಣಿಕೆಯ ಟ್ರೆಂಡ್ ಪ್ರಕಾರ ಬಿಜೆಪಿ ಅಧಿಕಾರಕ್ಕೇರಲು ಬೇಕಿರುವ 150ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದ್ದು, ಟಿಎಂಸಿ ಹಿನ್ನಡೆ ಅನುಭವಿಸಿದೆ. ಮಮತಾ ಬ್ಯಾನರ್ಜಿಯ ಮೂರನೇ ಬಾರಿಯ ಸಿಎಂ ಪಟ್ಟಕ್ಕೆ ಹಿನ್ನಡೆ ಸಾಧ್ಯತೆ ದಟ್ಟವಾಗಿದೆ.

ಕಳೆದ ಬಾರಿ, 2021ರ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಮಮತಾರನ್ನು ಸೋಲಿಸಿದ್ದ ಸುವೇಂದು ಅಧಿಕಾರಿ, ಈ ಬಾರಿಯೂ ಭವಾನಿಪುರ ಕ್ಷೇತ್ರದಲ್ಲಿ ಮಮತಾಗೆ ಪೈಪೋಟಿ ನೀಡಲು ಮುಂದಾಗಿದ್ದರು. ಆದರೆ ಸದ್ಯದ ಮತ ಎಣಿಕೆಯ ಫಲಿತಾಂಶ ನೋಡುವಾಗ ಮಮತಾ ಅವರು 2000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. 2021ರಲ್ಲೇ ನಡೆದ ಭವಾನಿಪುರ ಉಪ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಮತ್ತೆ ಆಯ್ಕೆಯಾಗಿದ್ದರು.

ಸದ್ಯ ಬಂಗಾಳದಲ್ಲಿ ಬಜೆಪಿ 171 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದರೆ, ಟಿಎಂಸಿ 102 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. 2021ರ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು 294 ಸ್ಥಾನಗಳ ಪೈಕಿ 215 ಸ್ಥಾನಗಳನ್ನು ಗೆದ್ದಿತ್ತು.

ಕೋಲ್ಕತ್ತ ಜಿಲ್ಲೆಯೊಳಗೆ ಬರುವ ಭವಾನಿಪುರ ಕ್ಷೇತ್ರವು 2011ರಿಂದ ತೃಣಮೂಲ ಪಕ್ಷದ ಭದ್ರಕೋಟೆಯಾಗಿದೆ. ಆ ಸಮಯದಲ್ಲಿ ಸುಬ್ರತಾ ಬಕ್ಷಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಎರಡು ಹಂತಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಪ್ರತಿ ಹಂತದಲ್ಲೂ ಗುಂಡಿನ ಚಕಮಕಿ ನಡೆದಿತ್ತು. ಮತಯಂತ್ರ ಟ್ಯಾಂಪರಿಂಗ್ ಆರೋಪ ಕೇಳಿಬಂದಿತ್ತು. ಹಾಗಾಗಿ, 2 ಕ್ಷೇತ್ರಗಳಲ್ಲಿ15 ಮತಕೇಂದ್ರದಲ್ಲಿ ಮರು ಮತದಾನ ನಡೆದಿತ್ತು.


Share with

Leave a Reply

Your email address will not be published. Required fields are marked *