ಅಕ್ಷಯ ಪದವಿ ಕಾಲೇಜಿನಲ್ಲಿ ಬಿಹೆಚ್‌ಎಸ್ ವಿಭಾಗದ ವತಿಯಿಂದ TASTHRYA ಫುಡ್ ಫೆಸ್ಟ್

Share with

ಪುತ್ತೂರು :ಅಕ್ಷಯ ಪದವಿ ಕಾಲೇಜಿನಲ್ಲಿ ಬಿಹೆಚ್‌ಎಸ್ ವಿಭಾಗದ ವತಿಯಿಂದ TASTHRYA ಫುಡ್ ಫೆಸ್ಟ್ ಅಮೆರಿಕಾದ ಶ್ರೀ ರಘುನಾಥ್ ಮೂರ್ತಿಯವರ ಪ್ರಾಯೋಜಕತ್ವದಲ್ಲಿ ಅತ್ಯುತ್ತಮವಾಗಿ ಸಂಪನ್ನಗೊಂಡಿತು.’ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮ ಾಸ್ಟರ್ ಶೆಫ್ ಆಗಿರುವ ಮಹಮ್ಮದ್ ಆಶಿಕ್ ಇವರು ತಾನು ಬೆಳೆದು ಬಂದ ಜೀವನದ ಕಠಿಣ ಹಾದಿಗಳನ್ನು ಮೆಲುಕು ಹಾಕುತ್ತಾ ಕಠಿಣತೆ ಸಾಧನೆಗೆ ದಾರಿ ಮಾಡಿಸಿ ಕೊಡುತ್ತದೆ. ಹಾಗಾಗಿ ಪ್ರತೀ ಒಂದು ಕ್ಷಣವೂ ಕಲಿಕೆಯನ್ನು ನೀಡುತ್ತದೆ ಎನ್ನುತ್ತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಮತ್ತು ಹೆಸರಾಂತ ಉದ್ಯಮಿಯಾಗಿರುವ ಗೌರಿ ಅಕ್ಷಯ ಇವರು ಉತ್ತಮವಾದ ಈ ಕಾರ್ಯಕ್ರಮಕ್ಕೆ ಬಂದಿರುವುದು ನನ್ನ ಪುಣ್ಯ. ಉತ್ತಮ ಸಂಯೋಜನೆಯ ಕಾರ್ಯಕ್ರಮ. ನನ್ನ ಸಂಪೂರ್ಣ ಸಹಕಾರ ಈ ಕಾಲೇಜಿಗೆ ಎಂದಿಗೂ ಇರುವುದು ಎನ್ನುತ್ತಾ ಮನಸಾರೆ ಶುಭಾಶಯಗಳನ್ನು ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಜಯಂತ್ ನಡುಬೈಲ – ಇಂದಿನ ಕಾರ್ಯಕ್ರಮಕ್ಕೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಶ್ರಮ ಸಾರ್ಥಕವಾಗಿದೆ. ಮತ್ತು ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಮತ್ತು 100% ಪ್ಲೇಸೆಂಟ್ ಆಗಿರುವುದ ಅಕ್ಷಯ ಕಾಲೇಜಿನ ಯಶಸ್ಸು ಮತ್ತು ಹೆಮ್ಮೆ ಎನ್ನುತ್ತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವೇದಿಕೆಯಲ್ಲಿ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾಗಿರುವ ಶ್ರೀಮತಿ ಕಲಾವತಿ ಜಯಂತ್, ಅಕ್ಷಯ ಪದವಿ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಕೆ ಪಕ್ಕಳ, ಆಡಳಿತ ಅಧಿಕಾರಿಯಾದ ಅರ್ಪಿತ್ ಟಿ. ಎ, ಶೈಕ್ಷಣಿಕ ಮಾರ್ಗದರ್ಶಕರಾದ ಅಭಿಲಾಶ್ ಕ್ಷತ್ರಿಯ ಮತ್ತು ಕಾಯು ಸಂಘದ

ಅಧಕ್ಷರಾಗಿರುವ ಗಗನ್ ಉಪಸ್ಥಿತರಿದ್ದರು.

ಸಾಂಸ್ಕ ತಿಕ ವೈವಿಧ್ಯ:

ಇದೆ ವೇಳೆ ಚೆಂಡೆ, ನೃತ್ಯ, ಹಾಡು ಸೇರಿದಂತೆ ವಿವಿಧ ರೀತಿಯ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆದುವು.

ವಿಚಾರ ಗೋಷ್ಠಿ:

ಇದೇ ವೇಳೆ ಮಂಗಳೂರು ಅಡುಗೆ ಶೈಲಿಯ ಸಾಂಸ್ಕೃತಿಕ ಮಹತ್ವ, ಆಧುನಿಕ ಪ್ರಭಾವಗಳು, ಆಧುನಿಕ ಪದಾರ್ಥಗಳ ತಯಾರಿಕಾ ವಿಧಾನಗಳನ್ನು ಉಳಿಸುವೆ ಅಗತ್ಯ, ಹಾಗೂ ಈ ಶ್ರೀಮಂತ ಆಹಾರ ಪರಂಪರೆಯನ್ನು ಮುಂದಿನ ಪೀಳಿಗೆಯವರು ಹೇಗೆ ಕಾಪಾಡಬಹುದು ಎಂಬ ವಿಚಾರಗಳ ಕುರಿತಾಗಿ ವಿಚಾರ ಗೋಷ್ಠಿ ನಡೆಯಿತು. ಫುಡ್ ಫೆಸ್ಟ್ ನಲ್ಲಿ ರುಚಿಯಾದ ಅನೇಕ ಖ ವಾದ್ಯಗಳು ಇದ್ದು ನೂರಾರು ಮಂದಿ ಇದನ್ನು ಸವಿದರು. ಬಿಹೆಚ್‌ಎಸ್ ವಿಭಾಗದ HOD ಯಾದ ಅವಿನಾಶ್ ಸ್ವಾಗತಿಸಿ, ಪ್ರಜ್ವಲ್ ವಂದಿಸಿ, ಉಪನ ಾಸಕಿ ಕು. ಶ್ರತ ಅತಿಥಿಗಳ ಪರಿಚಯ ವಾಚಿಸಿ ನಿರೂಪಿಸಿದರು


Share with

Leave a Reply

Your email address will not be published. Required fields are marked *