ಫೆ.3-10: ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ

Share with

ವಾಗರ್ಥಾವಿವ ಸಂಪೃಕೌ ವಾಗರ್ಥ ಪ್ರತಿಪತ್ತಯೇ । ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರಹ ।।

ಕಾಸರಗೋಡು: ಕಾಸರಗೋಡು ಜಿಲ್ಲೆಯ ಮವ್ವಾರು ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕವು 2025 ಫೆಬ್ರವರಿ 2 ರಿಂದ 10ರ ವರೆಗೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ನೆರವೇರಲಿದೆ.

ಪುಣ್ಯ ಕ್ಷೇತ್ರದ ಇತಿಹಾಸವೇನು?

ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಯ ಮಾಯಿಪ್ಪಾಡಿ ರಾಜಮನೆತನದ ಆಡಳಿತೆಗೊಳಪಟ್ಟ ದೇವಾಲಯಗಳ ಪೈಕಿ ನೆಕ್ರಾಜೆ ಗ್ರಾಮದ ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಾಲಯವು ಪುರಾತನವೂ, ಪ್ರಸಿದ್ಧವೂ ಆದ ನಾಲ್ಕು ಉಪದೇವಾಲಯಗಳಲ್ಲಿ ಒಂದಾಗಿದೆ.

ಈ ಕ್ಷೇತ್ರವು ಆಸ್ತಿಕರಿಗೆ ದಾರ್ಶನಿಕತೆ ಹಾಗೂ ಕಾರಣಿಕತೆಯ ನೆಲೆಬೀಡಾಗಿದೆ. ನಂಬಿದ ಭಕ್ತರಿಗೆ ಸಕಲ ಇಷ್ಟಾರ್ಥಗಳನ್ನು ನೀಡುವ ದಿವ್ಯ ಸನ್ನಿಧಿಯಾಗಿದೆ. ಭಗವದ್ಭಕ್ತರ ಭಕ್ತಿಸಂಕಲ್ಪಕ್ಕೆ ಸಾಕ್ಷಾತ್ಕಾರವಾದ ಈ ಕ್ಷೇತ್ರವು 1998ರಲ್ಲಿ ಜೀರ್ಣೋದ್ಧಾರಗೊಂಡು ನವೀಕರಣ ಪುನ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ವೈಭವಯುತವಾಗಿ ಜರುಗಿತು. ಅಲ್ಲದೆ 2014 ಮಾರ್ಚ್ ತಿಂಗಳಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಧ್ವಜಸ್ತಂಭ ಪ್ರತಿಷ್ಠೆಯು ವಿಜೃಂಭಣೆಯಿಂದ ನೆರವೇರಿತು.

ವಿವಾಹ ಭಾಗ್ಯ … ಸಂತಾನ ಭಾಗ್ಯ :
ಈ ಪುಣ್ಯಕ್ಷೇತ್ರದಲ್ಲಿ ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಿಕೊಂಡರೆ ವಿವಾಹಯೋಗ, ಸಂತಾನಭಾಗ್ಯ, ವಿದ್ಯಾಬುದ್ಧಿ, ಆಯುರಾರೋಗ್ಯ ಸಂಪತ್ತು ಪ್ರಾಪ್ತವಾಗುವುದಲ್ಲದೆ ಕಷ್ಟಕಾರ್ಪಣ್ಯಗಳು ದೂರವಾಗುತ್ತವೆ ಎಂಬ ನಂಬಿಕೆ ಜನಮಾನಸದಲ್ಲಿ ನೆಲೆನಿಂತಿದೆ. ವಿಶೇಷವಾಗಿ ಇಲ್ಲಿ ಸ್ವಯಂವರಪಾರ್ವತೀ ಪ್ರಾರ್ಥನೆಯನ್ನು ನೆರವೇರಿಸಲು ನಾನಾ ಕಡೆಗಳಿಂದ ಭಕ್ತರು ಆಗಮಿಸಿ, ಪ್ರಾರ್ಥಿಸಿ ತಮ್ಮ ಇಷ್ಟಾರ್ಥ ಸಿದ್ಧಿಯನ್ನು ಪಡೆಯುತ್ತಾರೆ. ಅವಿವಾಹಿತರಿಗೆ ,ಕಂಕಣಭಾಗ್ಯವನ್ನು ಒದಗಿಸುವ ಸ್ವಯಂವರ ಪ್ರಾರ್ಥನೆ ಇಲ್ಲಿನ ಸೇವೆಗಳಲ್ಲಿ ಪ್ರಮುಖವಾದುದು. ಶ್ರೀ ಕ್ಷೇತ್ರದಲ್ಲಿ ಪೂರ್ವಾಭಿಮುಖವಾಗಿ ಶ್ರೀ ಮಹೇಶ್ವರನೂ, ಪಶ್ಚಿಮಾಭಿಮುಖವಾಗಿ ಶ್ರೀ ಉಮೆಯೂ, ಉಪದೇವತೆಗಳಾಗಿ ಗಣಪತಿ ಮತ್ತು ದಕ್ಷಿಣಾಮೂರ್ತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತದೆ. ಅಲ್ಲದೆ ನಾಗದೇವ, ಉಳ್ಳಾಕುಳು, ಗುಳಿಗ, ಧೂಮಾವತೀ ಪರಿವಾರ ದೈವಗಳ ಸಾನ್ನಿಧ್ಯಗಳಿದ್ದು ಪರ್ವದ ತಂಬಿಲಾದಿ ಸೇವಾ ಕಾರ್ಯಗಳು ನಡೆದುಬರುತ್ತವೆ. ಶ್ರೀ ಕ್ಷೇತ್ರದಲ್ಲಿ ಇತ್ತೀಚೆಗೆ ದೈವಜ್ಞರಾದ ಶ್ರೀ ನಾಗೇಂದ್ರ ಭಾರದ್ವಾಜ್ ಸುರತ್ಕಲ್ ಇವರ ನೆ ನಡೆದ ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಂತೆ ನಾಗದೋಷ ಪರಿಹಾರಕ್ಕಾಗಿ ಶ್ರೀ ಕ್ಷೇತ್ರದಲ್ಲಿ ಸರ್ಪಸಂಸ್ಕಾರ, ಸರ್ವಪ್ರಾಯಶ್ಚಿತವಾಗಿ ಬಲಿ ನಡೆಸಿದ ಬಳಿಕ ಪ್ರಕೃತ ಆರಾಧನೆ ನಡೆಸುವ ಪಾಂಡವರ ಕೆರೆಯ ಸಮೀಪದ ಶ್ರೀ ನಾಗದೇವರ ಕಟ್ಟೆಯಲ್ಲಿ ಐದು ಹೆಡೆಯ ನೂತನ ನಾಗಲೇ ಬ್ರಹ್ಮ ಶ್ರೀ ದೇಲಂಪಾಡಿ ಗಣೇಶ ತಂತ್ರಿಯವರ ನೇತೃತ್ವದಲ್ಲಿ ಪ್ರತಿಷ್ಠೆ ಮಾಡಲಾಯಿತು. ಪ್ರತಿ ತಿಂಗಳ ಆಶ್ಲೇಷ ನಕ್ಷತ್ರದಂದು ಇಲ್ಲಿ ಈ ಹಿಂದೆ ನಡೆದು ನಾಗತಂಬಿಲ ಸೇವೆಯನ್ನು ನಡೆಸಲಾಗುತ್ತಿದೆ.


Share with

Leave a Reply

Your email address will not be published. Required fields are marked *