ಕಾಸರಗೋಡು: ಕಾಸರಗೋಡು ಭಾಗದಲ್ಲಿ ಇಂದು ಮುಂಜಾನೆಯಿಂದ ಗಾಳಿ ಹಾಗೂ ಧಾರಾಕಾರ ಮಳೆ ಸುರಿದಿದೆ. ಸುರಿದ ಮಳೆಗೆ ರಸ್ತೆಗಳಲ್ಲಿ ನೀರು ಹರಿದು ಹೋಗುವಂತಾಗಿದೆ.

ಹವಾಮಾನ ವೈಪರಿತ್ಯದಿಂದಾಗಿ ಈ ಬಾರಿ ಮಾನ್ಸೂನ್ ಮಳೆಯ ಪ್ರಮಾಣ ಕಮ್ಮಿಯಾಗಿದ್ದು ಕೃಷಿಕರು ಪರದಾಡುವಂತಾಗಿತ್ತು. ಆದರೆ ಇಂದು ಮುಂಜಾನೆಯೇ ಮಳೆರಾಯ ಅಬ್ಬರಿಸಿರುವುದರಿಂದ ಕೃಷಿಕರು ನಿಟ್ಟುಸಿರು ಬಿಡುವಂತಾಗಿದ್ದು, ಶಾಲಾ ಮಕ್ಕಳು ಮಾತ್ರ ಕೊಂಚ ಪರದಾಡುವಂತಾಗಿದೆ.




