ಟೀಮ್ ಇಂಡಿಯಾದ ಸೋಲಿಗೆ ಇದುವೇ ಕಾರಣ!

Share with

ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲನುಭವಿಸಿದೆ. ಮೊದಲ ಮ್ಯಾಚ್ನಲ್ಲಿ 34 ರನ್ಗಳಿಂದ ಸೋತಿದ್ದ ಭಾರತ ತಂಡ ದ್ವಿತೀಯ ಪಂದ್ಯದಲ್ಲಿ 1 ರನ್ನಿಂದ ಸೋಲೊಪ್ಪಿಕೊಂಡಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ಐರ್ಲೆಂಡ್ ವಿರುದ್ಧ ಸರಣಿ ಸೋತಿದೆ. ಈ ಸೋಲಿನ ಬಗ್ಗೆ ಟೀಮ್ ಇಂಡಿಯಾದ ಪ್ರದರ್ಶನದ ಬಗ್ಗೆ ಕಟು ಟೀಕೆಗಳು ವ್ಯಕ್ತವಾಗುತ್ತಿದೆ.  ಇಲ್ಲಿ ಟೀಮ್ ಇಂಡಿಯಾದ ಈ ಆಘಾತಕಾರಿ ವೈಫಲ್ಯಕ್ಕೆ ಕಾರಣವಾದ ಪ್ರಮುಖ ಅಂಶಗಳನ್ನು ನೋಡುವುದಾದರೆ…

ಐಪಿಎಲ್ ಗುಂಗು:
ಭಾರತದ ಫ್ಲಾಟ್ ಮತ್ತು ಬ್ಯಾಟಿಂಗ್ ಸ್ನೇಹಿ ಪಿಚ್‌ಗಳಲ್ಲಿ ಆಡಿ ಬಂದಿದ್ದ ಟೀಮ್ ಇಂಡಿಯಾ ಆಟಗಾರರಿಗೆ, ಬೆಲ್‌ಫಾಸ್ಟ್‌ನ ಮಂದಗತಿಯ ಮತ್ತು ಅನಿರೀಕ್ಷಿತ ಬೌನ್ಸ್ ಹೊಂದಿದ್ದ ಪಿಚ್ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚೆಂಡು ನಿಧಾನವಾಗಿ ಬ್ಯಾಟ್‌ಗೆ ಬರುತ್ತಿದ್ದರಿಂದ ಭಾರತದ ಪ್ರಮುಖ ಆಟಗಾರರು ರನ್ ಗಳಿಸಲು ತಿಣುಕಾಡಿದರು.

ಈ ಪಿಚ್‌ನ ಅತ್ಯಂತ ಅಪಾಯಕಾರಿ ಗುಣವೆಂದರೆ ಅದು ‘ಟೂ-ಪೇಸ್ಡ್’ ಆಗಿತ್ತು. ಅಂದರೆ, ಬೌಲರ್ ಎಸೆದ ಎಲ್ಲಾ ಚೆಂಡುಗಳು ಒಂದೇ ವೇಗದಲ್ಲಿ ಬ್ಯಾಟ್‌ಗೆ ಬರುತ್ತಿರಲಿಲ್ಲ. ಕೆಲವೊಮ್ಮೆ ಚೆಂಡು ನಿರೀಕ್ಷೆಗಿಂತ ವೇಗವಾಗಿ ಬಂದರೆ, ಇನ್ನು ಕೆಲವು ಎಸೆತಗಳು ಪಿಚ್‌ಗೆ ಬಿದ್ದ ನಂತರ ಅತ್ಯಂತ ನಿಧಾನವಾಗಿ  ಬ್ಯಾಟರ್‌ ಕಡೆಗೆ ಬರುತ್ತಿದ್ದವು.

ಆದರೆ ಐಪಿಎಲ್‌ನ  ಫ್ಲಾಟ್ ಪಿಚ್‌ಗಳ ಗುಂಗಿನಲ್ಲೇ ಇದ್ದ ಭಾರತೀಯ ಬ್ಯಾಟರ್‌ಗಳು, ಐರ್ಲೆಂಡ್‌ನ ಮಂದಗತಿಯ ಪಿಚ್‌ನಲ್ಲಿ ಕ್ರೀಸ್‌ನಲ್ಲಿ ಸೆಟ್ ಆಗಲು ಸಮಯ ತೆಗೆದುಕೊಳ್ಳಲೇ ಇಲ್ಲ. ಪಿಚ್ ಹೇಗಿದೆ ಎಂದು ಅರಿಯುವ ಮುನ್ನವೇ ಮೊದಲ ಓವರ್‌ನಿಂದಲೇ ದೊಡ್ಡ ಶಾಟ್‌ಗಳನ್ನು ಹೊಡೆಯಲು ಮುಂದಾಗಿದ್ದರು. ಇದಕ್ಕೆ ಸಾಕ್ಷಿ ಎರಡನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಮೊದಲ ಓವರ್‌ನಲ್ಲೇ ಶೂನ್ಯಕ್ಕೆ ಔಟಾಗಿದ್ದು.


Share with

Leave a Reply

Your email address will not be published. Required fields are marked *