ಪುತ್ತೂರು : ಅಕ್ಷಯ ಪದವಿ ಕಾಲೇಜಿನಲ್ಲಿ ಮನದ ಮಾತು ಕವಿತೆಯ ಹಾದಿ ಕವನ ಕಮ್ಮಟ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಂಶೋಧನ ಪ್ರಾಧ್ಯಾಪಕರ ಡಾ. ರಾಜೇಶ್ ಬೆಜ್ಜಂಗಳ ಇವರು ಹಳೆಗನ್ನಡ, ಚಂಪೂ ಕಾವ್ಯ ಮತ್ತು ನವ ಸಾಹಿತ್ಯದ ಸವಿಸ್ತಾರ ವಿವರಣೆಯೊಂದಿಗೆ ಬರಹದ ಪ್ರಾಮುಖ್ಯತೆಯನ್ನು ತಿಳಿಸುತ್ತಾ ವಿದ್ಯಾರ್ಥಿಗಳ ಸಹಬಾಗಿತ್ವವನ್ನು ಪಡೆದುಕೊಂಡು ಕಾರ್ಯಾಗಾರವನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಬರಹವನ್ನು ಬರೆಯಬೇಕು ಆಗ ಜ್ಞಾನ ವೃದ್ಧಿ ಆಗುವುದು. ಕೇವಲ ಪಠ್ಯಕ್ಕೆ ಮಾತ್ರವಲ್ಲದೆ ನೀವು ಜೀವನಪರ್ಯಂತ ಬರಹವನ್ನು ಮೈಗೂಡಿಸಿ ಎಂದು ಹೇಳುತ್ತಾ ಶುಭಹಾರೈಸಿದರು.

ಅಕ್ಷಯ ಪದವಿ ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ ಪಕ್ಕಳ ಮಾತನಾಡಿ ಮನುಷ್ಯ ಬದುಕಿನಲ್ಲಿ ನೋವು- ನಲಿವು ಗಳನ್ನು ಬರಹದ ಮೂಲಕ ಸಾದರಪಡಿಸಿದಾಗ ಅದು ಸಾಹಿತ್ಯವಾಗುತ್ತದೆ. ಕವನವನ್ನು ನಾವು ಹೇಗೆ ಹುಟ್ಟು ಹಾಕುವುದು ಎಂಬ ವಿಚಾರಗಳನ್ನು ನಿಮಗೆ ತಲುಪಿಸಲು ಈ ಕಾರ್ಯಾಗಾರವು ನೂರಕ್ಕೆ ನೂರು ಶೇಕಡ ನಿಮಗೆ ಉಪಯೋಗವಾಗುತ್ತದೆ. ನೀವು ಅದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಜಯಂತ್ ನಡುಬೈಲು ಸರ್ ಇವರು ಬದುಕಿನುದ್ದಕ್ಕ ಸಾಹಿತ್ಯ ಎನ್ನುವುದು ನಮ್ಮಲ್ಲಿ ಅಂತರ್ಗತವಾಗಿರುವ ದೀಪ್ತಿ. ಇಂತಹ ವೇದಿಕೆಗಳನ್ನು ಸದುಪಯೋಗ ಪಡಿಸಿಕೊಂಡಾಗ ಪ್ರತಿಭೆಗಳು ಅನಾವರಣವಾಗುತ್ತದೆ ಎಂದು ಶುಭಹಾರೈಸಿದರು.

ಇದೇ ವೇಳೆ ಕವನ ರಚನೆ ಮತ್ತು ಅನುಭವ ಕಥನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು.
ವೇದಿಕೆಯಲ್ಲಿ ಆಂತರಿಕ ಭರವಸೆ ಗುಣಮಟ್ಟ ಕೋಶ ಇದರ ಸಂಯೋಜಕಿ ರಶ್ಮಿ, ಅನ್ವಯ ಕನ್ನಡ ಸಾಹಿತ್ಯ ಸಂಘದ ಕಾರ್ಯದರ್ಶಿಯಾದ ಕು. ದಾಮಿನಿ ಉಪಸ್ಥಿತರಿದ್ದರು.
ಕನ್ನಡ ಭಾಷಾ ವಿಭಾಗ ಮುಖ್ಯಸ್ಥರಾದ ಹರಿಶ್ಚಂದ್ರ ಸಿ ಪ್ರಸ್ತಾವನೆ ಮಾಡಿ, ವಿದ್ಯಾರ್ಥಿನಿಯರಾದ ವೀಕ್ಷಾ ದ್ವಿತೀಯ ಬಿಸಿಎ ಮತ್ತು ಸೃಷ್ಟಿ ತೃತೀಯ ಬಿಸಿಎ ಪ್ರಾರ್ಥಿಸಿದರು. ಹರಿಪ್ರಸಾದ್ ತೃತೀಯ ಬಿಎ ಅತಿಥಿಗಳ ಪರಿಚಯ ವಾಚನ ಮಾಡಿ, ಕನ್ನಡ ಉಪನ್ಯಾಸಕರಾದ ರಶ್ಮಿತಾ ಸ್ವಾಗತಿಸಿ, ಬಹುಮಾನಿತರ ಪಟ್ಟಿ ವಾಚನ ಮಾಡಿ, ಅಮೃತ್ ರಾಜ್ ವಂದಿಸಿದರು. ಗ್ರೀಷ್ಮ ದ್ವಿತೀಯ ಬಿ.ಕಾಂ ಕಾರ್ಯಕ್ರಮ ನಿರೂಪಿಸಿದರು.




