ಮಂಗಳೂರು: ಫಿಫಾ ವಿಶ್ವಕಪ್ ಅಧಿಕೃತ ಆಲ್ಬಂನಲ್ಲಿರುವ ‘ಸೀರ್ ಸೀರ್’ ಎನ್ನುವ ಹಾಡಿನ ನಿರ್ಮಾಣದಲ್ಲಿ ಮಂಗಳೂರು ಮೂಲದವರೊಬ್ಬರು ಮಹತ್ವದ ಪಾತ್ರ ವಹಿಸಿದ್ದಾರೆ.

ಮಂಗಳೂರಿನ ಎ ಆ್ಯಂಡ್ ಆರ್ ಕನ್ಸಲ್ವೆಂಟ್, ಪ್ರಸ್ತುತ ಮುಂಬಯಿಯಲ್ಲಿರುವ ಅಕ್ಷತ್ ಮೂಡುಬಿದಿರೆ ಅವರು ಗೀತೆ ರಚನೆಯ ಭಾಗವಾಗಿದ್ದಾರೆ. ವಿಶ್ವಕಪ್‌ಗಾಗಿ ನಿರ್ಮಾಣವಾದ ಗೀತೆಯೇ ಸೀರ್ ಸೀರ್. ಗೀತೆಯನ್ನು ಇಂಗ್ಲಿಷ್, ಫ್ರೆಂಚ್ ಹಾಗೂ ಅರೇಬಿಕ್ ಭಾಷೆಗಳಲ್ಲಿ ನಿರ್ಮಿಸಲಾಗಿದೆ.




