ಎಂಎಸ್ ಧೋನಿಗಾಗಿ ಕಾದ ಅಭಿಮಾನಿಗಳಿಗೆ ಸಿಕ್ತು ಮತ್ತೊಂದು ಬ್ಯಾಡ್ ನ್ಯೂಸ್

Share with

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸಮನ್ ಹಾಗೂ ಕೀಪರ್ ಎಂಸ್ ಧೋನಿಗೆ ಸ್ನಾಯು ಸೆಳೆತವಿದ್ದು, ಐಪಿಎಲ್ ಆರಂಭ ಆದ ಮೊದಲ ಎರಡು ವಾರ ಅವರು ಲಭ್ಯವಿರುವುದಿಲ್ಲ ಎಂದು ಕೇಳಿ ಅಭಿಮಾನಿಗಳು ಬೇಸರಗೊಂಡರು. ಆದರೆ, ಈಗ ಧೋನಿ ಈಗ ಸತತ ಏಳು ಮ್ಯಾಚ್ಗಳನ್ನು ಮಿಸ್ ಮಾಡಿಕೊಂಡಿದ್ದಾರೆ. ಈಗ ಅವರ ಬರುವಿಕೆಗಾಗಿ ಕಾದು ಕುಳಿತ ಫ್ಯಾನ್ಸ್ಗೆ ಬೇಸರ ಆಗುವ ಸುದ್ದಿಯೊಂದು ಬಂದಿದೆ.

ಧೋನಿ ಅವರು ಇತ್ತೀಚೆಗೆ ಪ್ರ್ಯಾಕ್ಟಿಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದನ್ನು ನೋಡಿದ ಅನೇಕರು ಧೋನಿ ಮುಂಬೈ ವಿರುದ್ಧದ ಪಂದ್ಯಕ್ಕೆ ಫೀಲ್ಡ್ಗೆ ಇಳಿಯುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಿಲ್ಲ. ಅವರು ಮುಂಬೈ ವಿರುದ್ಧದ ಪಂದ್ಯ ಮಿಸ್ ಮಾಡಿಕೊಂಡಿದ್ದಾರೆ. ಅವರು ಫೀಲ್ಡ್ಗೆ ಇಳಿಯದ್ದಕ್ಕೆ ಕಾರಣ ಸಿಕ್ಕಿದೆ.


Share with

Leave a Reply

Your email address will not be published. Required fields are marked *