ವಿಶೇಷ ಚೇತನ ಮಕ್ಕಳೊಂದಿಗೆ ಉಪ್ಪಳ ಹಬ್‌ನಲ್ಲಿ ಓಣಂ–ನಬಿದಿನಂ ಆಚರಣೆ

Share with

ಮಂಜೇಶ್ವರ: ಸಮಗ್ರ ಶಿಕ್ಷಾ ಕೇರಳ, BRC ಮಂಜೇಶ್ವರದ ನೇತೃತ್ವದಲ್ಲಿ ವಿಶೇಷ ಚೇತನ ಮಕ್ಕಳನ್ನು ಒಳಗೊಂಡು ಓಣಂ ಹಾಗೂ ನಬಿದಿನಂ ಆಚರಣೆಯನ್ನು ಆಗಸ್ಟ್ 22ರಂದು ಉಪ್ಪಳ ಹಬ್‌ನಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಶ್ರೀಯುತ ನಾರಾಯಣ ಡಿ. ವಹಿಸಿದ್ದರು. ಮಂಗಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ಗೋಲ್ಡನ್ ಅಬ್ದುಲ್ ರೆಹಮಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಮಂಜೇಶ್ವರ ತಹಶೀಲ್ದಾರ್ ಶ್ರೀಯುತ ಸುಬೈರ್ ಎಲ್.ಕೆ., SSK ಕಾಸರಗೋಡು DPO ಶ್ರೀಮತಿ ಚರಿಸ್ಮಾ, DIET ಫ್ಯಾಕಲ್ಟಿ ಶ್ರೀಯುತ ಸಿದ್ದೀಕ್ ಅಸ್ಲಂ, ಮಂಜೇಶ್ವರದ ನಿವೃತ್ತ ಶಿಕ್ಷಣಾಧಿಕಾರಿ ಶ್ರೀಯುತ ಜಾರ್ಜ್ ಕ್ರಾಸ್ತಾ, GLPS ಮುಳಿಂಜ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಿತ್ರಾವತಿ, GHSS ಮಂಗಲ್ಪಾಡಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಂತಿ, GBLPS ಮಂಗಲ್ಪಾಡಿ ಮುಖ್ಯೋಪಾಧ್ಯಾಯ ಶ್ರೀಯುತ ಇಸ್ಮಾಯಿಲ್, ಉಪ್ಪಳ ಹಬ್‌ನ ಶ್ರೀಯುತ ಫಾರೂಕ್ ದುಡಿಮ್ಮ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು BRC ಮಂಜೇಶ್ವರದ BPC ಶ್ರೀಯುತ ರಾಜಗೋಪಾಲನ್ ಸ್ವಾಗತಿಸಿದರು. BRC ಮಂಜೇಶ್ವರದ ಟ್ರೈನರ್ ಶ್ರೀಮತಿ ಸುಮಯ್ಯಾ ವಂದಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಗಣ್ಯರಿಂದ ನೆನಪಿನ ಕಾಣಿಕೆಗಳನ್ನು ವಿತರಿಸಲಾಯಿತು. BRCಯ ಸಹೋದ್ಯೋಗಿಗಳಿಂದ ತಿರುವಾತಿರ ಪ್ರದರ್ಶನ ನಡೆಯಿತು. ಕೇರಳ ರಾಜ್ಯ ಕಲಾಭವನ ಮಣಿ ಪುರಸ್ಕೃತ ಪ್ರವೀಣ್ ಪೂಂಗೋಡ್ ಹಾಗೂ ಬಳಗದವರು ಓಣಂ ಸಂಬಂಧಿತ ಹಾಡುಗಳನ್ನು ಹಾಡಿ ಮಕ್ಕಳನ್ನು ರಂಜಿಸಿದರು. ಮಕ್ಕಳಿಂದಲೂ ವಿವಿಧ ಕಲಾ ಪ್ರದರ್ಶನಗಳು ನಡೆದವು.

50ಕ್ಕೂ ಹೆಚ್ಚು ವಿಶೇಷ ಚೇತನ ಮಕ್ಕಳು ಹಾಗೂ ಅವರ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಆಚರಣೆಯನ್ನು ಯಶಸ್ವಿಗೊಳಿಸಿದರು.


Share with

Leave a Reply

Your email address will not be published. Required fields are marked *