ಫಾರೆಕ್ಸ್ ರಿಸರ್ವ್ಸ್: ಮತ್ತೆ 700 ಬಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಿದ ಭಾರತ

Share with

ನವದೆಹಲಿ, ಏಪ್ರಿಲ್ 19: ಭಾರತದ ಫಾರೆಕ್ಸ್ ರಿಸರ್ವ್ಸ್ (Forex reserves) ಏಪ್ರಿಲ್ 10ರಂದು ಅಂತ್ಯಗೊಂಡ ವಾರದಲ್ಲಿ 3.825 ಬಿಲಿಯನ್ ಡಾಲರ್ನಷ್ಟು ಏರಿದೆ. ಹಿಂದಿನ ವಾರದಲ್ಲೂ 9.063 ಬಿಲಿಯನ್ ಡಾಲರ್ನಷ್ಟು ರಿಸರ್ವ್ಸ್ ಹೆಚ್ಚಳ ಆಗಿತ್ತು. ಇದರೊಂದಿಗೆ ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ 700.946 ಬಿಲಿಯನ್ ಡಾಲರ್ಗೆ ಏರಿದೆ. ಆದರೆ, ಸಾರ್ವಕಾಲಿಕ ಗರಿಷ್ಠ ಫಾರೆಕ್ಸ್ ಮೀಸಲು ನಿಧಿಯ ಮಟ್ಟ ಮುಟ್ಟಲು ಇನ್ನೂ 28 ಬಿಲಿಯನ್ ಡಾಲರ್ ಬೇಕಾಗುತ್ತದೆ.

2026ರ ಫೆಬ್ರುವರಿ 27ರಂದು ಭಾರತದ ಫಾರೆಕ್ಸ್ ರಿಸರ್ವ್ಸ್ 728.494 ಬಿಲಿಯನ್ ಡಾಲರ್ ಆಗಿತ್ತು. ಆ ನಂತರದಲ್ಲಿ ಇರಾನ್ ಇತ್ಯಾದಿ ಕಡೆ ಜಾಗತಿಕ ರಾಜಕೀಯ ಸಂಕಷ್ಟಗಳ ಕಾರಣಗಳಿಗೆ ರುಪಾಯಿ ಮೇಲೆ ಒತ್ತಡ ಬಿದ್ದು, ಆರ್ಬಿಐ ತನ್ನ ರಿಸರ್ವ್ಸ್ನಲ್ಲಿದ್ದ ಒಂದಿಷ್ಟು ಡಾಲರ್ಗಳನ್ನು ಮಾರುತ್ತಾ ಹೋಗಬೇಕಾಯಿತು. ಹೀಗಾಗಿ, ಫಾರೆಕ್ಸ್ ರಿಸರ್ವ್ಸ್ ಹಲವು ಬಿಲಿಯನ್ ಡಾಲರ್ಗಳಷ್ಟು ಕಡಿಮೆಗೊಂಡಿತು.

ಫಾರೀನ್ ಕರೆನ್ಸಿ ಆಸ್ತಿಯಲ್ಲಿ ಗಣನೀಯ ಹೆಚ್ಚಳ
ಏಪ್ರಿಲ್ 10ರಂದು ಅಂತ್ಯಗೊಂಡ ವಾರದಲ್ಲಿ ಏರಿಕೆಯಾದ 3.285 ಬಿಲಿಯನ್ ಡಾಲರ್ ಫಾರೆಕ್ಸ್ ಮೀಸಲು ನಿಧಿಯಲ್ಲಿ ಬಹುಪಾಲು ಫಾರೀನ್ ಕರೆನ್ಸಿಗಳೇ ಇವೆ. ಬರೋಬ್ಬರಿ 3.127 ಬಿಲಿಯನ್ ಡಾಲರ್ ಮೊತ್ತದ ವಿದೇಶೀ ಕರೆನ್ಸಿ ಆಸ್ತಿಗಳನ್ನು ಆರ್ಬಿಐ ಹೆಚ್ಚಿಸಿಕೊಂಡಿದೆ.

ಇನ್ನಿತರ ಆಸ್ತಿಗಳ ಪೈಕಿ ಗೋಲ್ಡ್ ರಿಸರ್ವ್ಸ್ 601 ಮಿಲಿಯನ್ ಡಾಲರ್ನಷ್ಟು ಹೆಚ್ಚಿದೆ. ಎಸ್ಡಿಆರ್ಗಳು 56 ಮಿಲಿಯನ್ ಡಾಲರ್, ಹಾಗೂ ಭಾರತದ ಐಎಂಎಫ್ ಮೀಸಲು ಸ್ಥಾನ 56 ಮಿಲಿಯನ್ ಡಾಲರ್ ಏರಿಕೆ ಆಗಿದೆ.


Share with

Leave a Reply

Your email address will not be published. Required fields are marked *