ಹೊಸಂಗಡಿ ಇನ್ಫೆಂಟ್ ಜೀಸಸ್ ಸೈರೊ ಮಲಬಾ‌ರ್ ಚರ್ಚ್ ನಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮಂಜೇಶ್ವರ ಶಾಸಕರಿಗೆ ಗೌರವಾರ್ಪಣೆ

Share with

ಮಂಜೇಶ್ವರ: ಇನ್ಫೆಂಟ್ ಜೀಸಸ್ ಸೈರೊ ಮಲಬಾ‌ರ್ ಚರ್ಚ್‌ ಹೊಸಂಗಡಿ ಇದರ ವತಿಯಿಂದ ಚರ್ಚ್ ಗೆ ಒಳಪಟ್ಟ ವಿವಿಧ ವಲಯಗಳಲ್ಲಿರುವ ಎಸ್.ಎಸ್.ಎಲ್.ಸಿ, ಪ್ಲಸ್ ಟು, ಪ್ರೊಫೆಷನಲ್ ಕೋರ್ಸ್ ಗಳಲ್ಲಿ ಅತ್ಯಧಿಕ ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕಣ್ಣೂರು ಯೂನಿವರ್ಸಿಟಿ ಮಂಜೇಶ್ವರ ಕ್ಯಾಂಪಸ್ ನಲ್ಲಿ (ಸ್ಕೂಲ್ ಆಫ್ ಲೀಗಲ್ ಸ್ಟಡೀಸ್) ಎಲ್.ಎಲ್. ಬಿಯಲ್ಲಿ ಉನ್ನತ ಪದವಿ (ಫಸ್ಟ್ ಕ್ಲಾಸ್) ಯನ್ನು ಪಡೆದ ಚರ್ಚ್ ನ ಧರ್ಮಗುರು ಫಾದರ್ ಲೂಯಿ ಮರಿಯಾ ದಾಸ್ ಇವರನ್ನ ಚರ್ಚ್ ನ ಆಡಳಿತ ಮಂಡಳಿ ಪರವಾಗಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಗೌರವಿಸಿದರು. ಅದೇ ರೀತಿ ಮಂಜೇಶ್ವರ ಶಾಸಕರಾಗಿ ಮೂರು ಬಾರಿ ಆಯ್ಕೆಯಾದ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ರವನ್ನು ಚರ್ಚ್ ನ ಆಡಳಿತ ಮಂಡಳಿ ಗೌರವಾಧಾರಗಳಿಂದ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಚರ್ಚ್ ನ ಫಾದರ್ ಲೂಯಿಸ್ ಮರಿಯಾ ದಾಸ್ ವಹಿಸಿದ್ದರು.

ಸಂತೋಷ್ ಶುಭಾಷಂಶನೆಗೈದರು, ಚರ್ಚ್ ನ ಕಾರ್ಡಿನೇಟರ್ ಥಾಮಸ್ ಪನೆಕಲ್ ಸ್ವಾಗತಿಸಿ, ಜಾಯಿ ಕೆಡಕೆಡತ್ ವಂದಿಸಿದರು. ಈ ವೇಳೆ ಚರ್ಚ್ ನ ಆಡಳಿತ ಮಂಡಳಿ ಪದಾಧಿಕಾರಿಗಳು, ಭಗಿನಿಯರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *