
ಯಕ್ಷಗಾನ ಕ್ಷೇತ್ರದ ಮದ್ದಲೆಗಾರ ಬರ್ಗುಳ ಗೋಪಾಲಕೃಷ್ಣ ಕುರುಪ್ (90ವ) ಮಾ.19 ರಂದು ನಿಧನರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಶಿಶಿಲದಲ್ಲಿ ಇವರು ನೆಲೆಸಿದವರು. ಮೂಲತಃ ಇವರು ಕೇರಳದವರು.
ಗೋಪಾಲಕೃಷ್ಣ ಕುರುಪ್ ಅವರು ಚೆಂಡೆ-ಮದ್ದಲೆ ನುಡಿತಗಳಲ್ಲಿ ಶಾಸ್ತ್ರಜ್ಞಾನವನ್ನು ಪಡೆದುಕೊಂಡಿದ್ದರು. ಅದನ್ನು ಪಠ್ಯರೂಪದಲ್ಲಿ ಪ್ರಕಟಿಸಿದವರಲ್ಲಿ ಇವರು ಮೊದಲಿಗರು. ಭಾಗವತಿಕೆಯ ಜ್ಞಾನ ಕೂಡಾ ಇವರಿಗಿತ್ತು. 1952 ಇವರು ಯಕ್ಷಗಾನ ಕ್ಷೇತ್ರವನ್ನು ಪ್ರವೇಶ ಮಾಡಿದರು.