ಚಿಕ್ಕಮಗಳೂರು: ತಾಲೂಕಿನ ಬಾಸ್ಕಲ್ ಸಮೀಪದ ನೆರಡಿ ಗ್ರಾಮದ ದೇವಸ್ಥಾನದ ಅರ್ಚಕ ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ.

ಬಾಸ್ಕಲ್ ಸಮೀಪದ ನೆರಡಿ ಗ್ರಾಮದ ದೇವಸ್ಥಾನ ಅರ್ಚಕ ಶ್ರೀಧರ್ (54) ಕೃತ್ಯ ಎಸಗಿದ ಆರೋಪಿ.
ಚಿಕ್ಕಮಗಳೂರು ನಗರದಲ್ಲಿನ ತನ್ನ ಬಾಡಿಗೆ ಮನೆಗೆ ಪೂಜೆ ನೆಪ ಹೇಳಿ ಯುವತಿಯನ್ನು ಕರೆಸಿಕೊಂಡಿದ್ದ ಈತ, ಅತ್ಯಾಚಾರ ಎಸಗಿದ್ದ. ಅಲ್ಲದೆ, ವಿಷಯ ತಿಳಿಸಿದರೆ ಮನೆಯವರಿಗೆ ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ಯುವತಿ ಈಗ 7 ತಿಂಗಳ ಗರ್ಭಿಣಿಯಾಗಿದ್ದಾಳೆ. ಈಗ ಚಿಕ್ಕಮಗಳೂರಿನ ಮಹಿಳಾ ಠಾಣೆಗೆ ದೂರು ನೀಡಲಾಗಿದೆ. ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ.




