
ತೆಲಂಗಾಣ: ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯ ಭದ್ರಾಚಲಂನ ಸುಭಾಷ್ ನಗರದಲ್ಲಿ ಬರೆಯಲು ಇಟ್ಟುಕೊಂಡಿದ್ದ ಪೆನ್ ಚುಚ್ಚಿ 5 ವರ್ಷದ ಬಾಲಕಿಯ ಸಾವು ಸಂಭವಿಸಿದ ದುರ್ಘಟನೆ ನಡೆದಿದೆ.
ರಿಯಾನ್ಶಿಕಾ ಎನ್ನುವ ಬಾಲಕಿ ಪೆನ್ನು ಚುಚ್ಚಿ ಸಾವನಪ್ಪಿದ ಬಾಲಕಿಯಾಗಿದ್ದಳೆ. ಈಕೆ ಯುಕೆಜಿಯಲ್ಲಿ ಓದುತ್ತಿದ್ದು ಜು. 1ರಂದು ತನ್ನ ಮನೆಯಲ್ಲಿ ಹಾಸಿಗೆಯ ಮೇಲೆ ಕುಳಿತು ಹೋಮ್ ವರ್ಕ್ ಮಾಡುತ್ತ ತನ್ನ ಪುಸ್ತಕಗಳೊಂದಿಗೆ ಆಟವಾಡುತ್ತಿದ್ದಾಗ, ಬ್ಯಾಲೆನ್ಸ್ ತಪ್ಪಿ ಮಂಚದಿಂದ ಕೆಳಗೆ ಬಿದ್ದಿದ್ದಾಳೆ. ಆಗ ಅವಳು ಹಿಡಿದಿದ್ದ ಪೆನ್ ಅವಳ ಕಿವಿಯ ಮೇಲ್ಬಾಗದಿಂದ ನೇರವಾಗಿ ತಲೆಗೆ ಆಳವಾಗಿ ಚುಚ್ಚಿದೆ. ಪೆನ್ನಿನ ಸುಮಾರು ಅರ್ಧದಷ್ಟು ಭಾಗ ಅವಳ ತಲೆಯೊಳಗೆ ತೂರಿ ಹೋಗಿತ್ತು ಎಂದು ವರದಿಯಾಗಿದೆ.





