ಬಿಗ್‌ಬಾಸ್ ಮನೆಯಲ್ಲಿ ಮತ್ತೆ ಮಂಜನ ಅಬ್ಬರ; ರೆಡ್ ಕಾರ್ಡ್ ಕೊಟ್ಟು ಹೊರಹಾಕಿದ್ದ ಸ್ಪರ್ಧಿಗೆ ಮತ್ತೊಂದು ಅವಕಾಶ!

Share with

ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಅನಿರೀಕ್ಷಿತ ಬೆಳವಣಿಗೆಯೊಂದು ನಡೆದಿದೆ. ತಮ್ಮ ಅತಿರೇಕದ ವರ್ತನೆ ಹಾಗೂ ಅಸಭ್ಯ ಪದ ಬಳಕೆಯಿಂದಾಗಿ ಬಿಗ್‌ಬಾಸ್ ಮನೆಯಿಂದ ಹೊರಹಾಕಲ್ಪಟ್ಟಿದ್ದ ಮಾಡರ್ನ್ ಮಹಾಕವಿ ಮಂಜುನಾಥ್ ಮತ್ತೆ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ದೀಪಾವಳಿ ಹಬ್ಬದ ಪ್ರಯುಕ್ತ ಬಿಗ್‌ಬಾಸ್ ವೀಕ್ಷಕರಿಗೆ ಈ ವಿಶೇಷ ಸರ್ಪ್ರೈಸ್ ನೀಡಲಾಗಿದೆ. ವಾರಾಂತ್ಯದ ಸಂಚಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ಮಂಜನನ್ನು ವೇದಿಕೆಗೆ ಆಹ್ವಾನಿಸಿ ಮತ್ತೆ ಮನೆಗೆ ಕಳುಹಿಸಿದ್ದಾರೆ.

ತಪ್ಪು ಒಪ್ಪಿಕೊಂಡ ಮಂಜ!

ಮತ್ತೆ ಮನೆ ಪ್ರವೇಶಿಸುವ ಮುನ್ನ ಮಾತನಾಡಿದ ಮಂಜ, ಕಳೆದ ಬಾರಿ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಈ ಬಾರಿ ತನ್ನ ಗುರಿ ಬಿಗ್‌ಬಾಸ್ ಸೀಸನ್ 13ರ ಕಪ್ ಗೆಲ್ಲುವುದಾಗಿದೆ ಎಂದು ಹೇಳಿದ್ದಾರೆ.

ಇನ್ನು ಮನೆಯೊಳಗೆ ಹೋಗುವ ಮುನ್ನ ತಮ್ಮದೇ ಶೈಲಿಯಲ್ಲಿ ಮಾತನಾಡಿದ ಮಂಜ, ‘ದೀಪಾವಳಿಗೆ ಸಿಹಿ ಜೊತೆಗೆ ಖಾರವನ್ನೂ ಕಳುಹಿಸುತ್ತಿದ್ದೀರಿ. ಮನೆಯೊಳಗೆ ಪಟಾಕಿ ಎಲ್ಲಾ ರೆಡಿ ಮಾಡಿಟ್ಟಿದ್ದಾರೆ. ಅಂಟಿಸಿಬಿಡುತ್ತೇನೆ’ ಎಂದು ಹೇಳಿದ್ದಾರೆ.

ಮಂಜನ ರೀ ಎಂಟ್ರಿಯಿಂದ ಸ್ಪರ್ಧಿಗಳಿಗೆ ಶಾಕ್!

ಸಹಸ್ಪರ್ಧಿಗಳ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಲ್ಲದೆ, ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ನಿಂದಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಮಂಜನಿಗೆ ರೆಡ್ ಕಾರ್ಡ್ ನೀಡಿ ಮನೆಯಿಂದ ಹೊರಹಾಕಲಾಗಿತ್ತು. ಇದೀಗ ಮತ್ತೆ ಅವಕಾಶ ನೀಡಿರುವುದು ಮನೆಯ ಇತರ ಸ್ಪರ್ಧಿಗಳಿಗೆ ಅಚ್ಚರಿ ಮೂಡಿಸಿದೆ.

ಮಂಜನ ರೀ ಎಂಟ್ರಿಯಿಂದ ದೊಡ್ಮನೆಯಲ್ಲಿ ಮತ್ತೆ ಜಗಳ, ಗದ್ದಲ ಶುರುವಾಗಲಿದೆಯೇ? ಈ ಬಾರಿ ತಮ್ಮ ವರ್ತನೆಯಲ್ಲಿ ಬದಲಾವಣೆ ತಂದುಕೊಂಡು ಆಟ ಮುಂದುವರಿಸುತ್ತಾರೆಯೇ ಎಂಬ ಕುತೂಹಲ ಬಿಗ್‌ಬಾಸ್ ಅಭಿಮಾನಿಗಳಲ್ಲಿ ಮೂಡಿದೆ.


Share with

Leave a Reply

Your email address will not be published. Required fields are marked *