ಮುಂಬೈಯಲ್ಲಿ ಹೃದಯಘಾತದಿಂದ ಉಪ್ಪಳ ಗೇಟ್ ನಿವಾಸಿ ನಿಧನ

Share with


ಉಪ್ಪಳ: ಉಪ್ಪಳ ಗೇಟ್ ನಿವಾಸಿ [ದಿ] ಮೊಹಮ್ಮದ್ ಹಾಜಿ ರವರ ಪುತ್ರ ಹನೀಫ್ [೫೯]ಮುಂಬೈಯಲ್ಲಿ ಹೃದಯಘಾತದಿಂದ ನಿಧನರಾದರು. ಗಲ್ಪ್ ಉದ್ಯೋಗಿಯಾದ ಇವರು ಹಲವು ದಿನಗಳ ಹಿಂದೆ ಊರಿಗೆ ಆಗಮಿಸಿದ್ದರು. ಬಳಿಕ ಅಗತ್ಯದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಮುಬೈಗೆ ತೆರಳಿದ್ದರು. ಅಲ್ಲಿ ಸ್ನೇಹಿತನ ಜೊತೆ ಕೊಠಡಿಯಲ್ಲಿ  ವಾಸವಾಗಿದ್ದರು. ಶುಕ್ರವಾರ ರಾತ್ರಿ  ಹೃದಯಘಾತದಿಂದ ನಿಧನಹೊಂದಿದ್ದಾರೆ. ಮೃತರು ತಾಯಿ ಜೈನಾಭ, ಪತ್ನಿ ಆಯಿಷಾ, ಮಕ್ಕಳಾದ ಸಫಾಫ್, ಶಾಹಿಫ, ಸಹೋದರಿ ಸಹೋದರಾದ ಮೂಸಾ, ಹಮೀದ್, ಕಾಲಿದ್, ಫಾತಿಮ್ಮ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.  ಮೃತದೇಹದ ಅಂತ್ಯಸAಸ್ಕಾರ  ಮಧ್ಯಾಹ್ನ ಉಪ್ಪಳ ಗೇಟ್ ಕುನ್ನಿಲ್ ಜುಮಾ ಮಸೀದಿಯಲ್ಲಿ ನಡೆಯಿತು.


Share with

Leave a Reply

Your email address will not be published. Required fields are marked *