ಡಿ.16-19: ಕಾಸರಗೋಡು ಮಲ್ಲಿಕಾರ್ಜುನ ದೇವಸ್ಥಾನದಲ್ಲಿ “ಕೋಟಿ ಪಂಚಾಕ್ಷರಿ ಜಪಯಜ್ಞ”

Share with

ಕಾಸರಗೋಡು: ಇಲ್ಲಿನ ಹೃದಯಭಾಗದಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಡಿ.1617,18 ಮತ್ತು 19 ರಂದು ಸಾರ್ವಜನಿಕ ಶ್ರೀ ಚಕ್ರ ಪೂಜೆ ಹಾಗೂ ಕೋಟಿ ಪಂಚಾಕ್ಷರಿ ಜಪ ಯಜ್ಞ ನಡೆಯಲಿದ್ದು ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿಯವರ ಮುಂದಾಳತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ.

ಪ್ರತಿದಿನ ಮಧ್ಯಾಹ್ನದವರೆಗೆ ಶಿವ ಪಂಚಾಕ್ಷರಿ ಜಪಯಜ್ಞ ಜರುಗಲಿದೆ. ಡಿ.18ರಂದು ಸಂಜೆ ಶ್ರೀ ಚಕ್ರಪೂಜೆ ನೆರವೇರಲಿದೆ. ಡಿ.19 ರಂದು ಅಪರಾಹ್ನ ಶ್ರೀ ರುದ್ರಹೋಮ ಸಂಪನ್ನಗೊಳ್ಳಲಿದೆ.

ಕಾರ್ಯಕ್ರಮಗಳು

ದಿನಾಂಕ 16-12-2024 ಸೋಮವಾರ ಬೆಳಗ್ಗೆ 6.30 ಕ್ಕೆ ದೇವತಾ ಪ್ರಾರ್ಥನೆ, 7.00 ಗಂಟೆಗೆ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಆಗಮನ ಹಾಗೂ ಕೋಟಿ ಪಂಚಾಕ್ಷರಿ ಜಪಯಜ್ಞಕ್ಕೆ ಪ್ರಥಮ ಸಮಿಧೆ ಸಮರ್ಪಣೆ, ಅಪರಾಹ್ನ 12.00 ಗಂಟೆಗೆ ಪೂರ್ಣಾಹುತಿ ನಡೆದು ಬಳಿಕ ಮಧ್ಯಾಹ್ನ 1.00 ಗಂಟೆಗೆ ಪ್ರಸಾದ ಭೋಜನ ನಡೆಯಲಿದೆ.

ಸಂಜೆ 5.00 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಕೋಟಿ ಪಂಚಾಕ್ಷರಿ ಜಪಯಜ್ಞ ಸಮಿತಿ ಸಭಾ ಕಾರ್ಯಾಧ್ಯಕ್ಷ ರಾಮ್‌ ಪ್ರಸಾದ್ ಅತಿಥಿಗಳನ್ನು ಸ್ವಾಗತಿಸಲಿದ್ದು,
ವೆಂಕಟರಮಣ ಬಾಲಗೋಕುಲದ ಮಕ್ಕಳಿಂದ ಪ್ರಾರ್ಥನೆ ನಡೆಯಲಿದೆ. ಕೋಟಿ ಪಂಚಾಕ್ಷರಿ ಜಪಯಜ್ಞ ಸಮಿತಿ ಅಧ್ಯಕ್ಷ ಡಾ। ಅನಂತ ಕಾಮತ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಎಡನೀರು ಮಠ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಎಡನೀರು ಮಠ ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿ, ಶ್ರೀ ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ತ್ರ ಪೇಟೆ ಶ್ರೀ ವೆಂಕಟರಮಣ ಕ್ಷೇತ್ರದ ಮೊಕ್ತೆಸರರು ಹಾಗೂ ತಂತ್ರಿಗಳು ಉಪಸ್ಥಿತರಿರಲಿದ್ದಾರೆ. ಮಲಬಾರ್ ದೇವಸ್ವಂ ಬೋರ್ಡ್ ಕಮೀಷನರ್ ಬಿಜು ಟಿ. ಚಂದ್ರಶೇಖರ್ ಮುಖ್ಯಅತಿಥಿಗಳಾಗಿ ಹಾಗೂ ಬೆಂಗಳೂರು ಮಾನವ ಹಕ್ಕು ಆಯೋಗ ಅಧ್ಯಕ್ಷ ಟಿ ಶ್ಯಾಮ್ ಭಟ್, ಮಲ್ಲಿಕಾರ್ಜುನ ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ಅಡ್ವ ಗೋವಿಂದನ್ ನಾಯರ್, ಮಲ್ಲಿಕಾರ್ಜುನ ದೇವಸ್ಥಾನ ಎಕ್ಸಿಕ್ಯೂಟಿವ್ ಆಫೀಸರ್ ರಾಜೇಶ್,
ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮುರಳೀಧರನ್, ಮುಂಬಯಿ ಉದ್ಯಮಿ ಚಂದ್ರಶೇಖರ್ ಶೆಟ್ಟಿ ಕುಕ್ಕುಂದೂರು, ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟಿ ಉಮೇಶ್ ಅನಂಗೂರು, ಬೆಂಗಳೂರು ಉದ್ಯಮಿ ಶ್ರೀಪತಿ ರಾವ್, ಕಾಸರಗೋಡು ಶ್ರೀ ಕೃಷ್ಣ ಹಾರ್ಡ್ವೇರ್ ಉದ್ಯಮಿ ಸುರೇಶ್, ಕೋಟಿ ಪಂಚಾಕ್ಷರಿ ಜಪಯಜ್ಞ ಸಮಿತಿ ಉಪಾಧ್ಯಕ್ಷೆ ಮೀರಾ ಕಾಮತ್ ಉಪಸ್ಥಿತರಿರಲಿದ್ದಾರೆ. ಕೋಟಿ ಪಂಚಾಕ್ಷರಿ ಜಪಯಜ್ಞ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ಕೆ ಆರ್ ಧನ್ಯವಾದ ನೆರವೇರಿಸಲಿದ್ದಾರೆ. ಪತ್ರಕರ್ತ ವಿ ಜಿ ಕಾಸರಗೋಡು ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

ದಿನಾಂಕ 17-12-2024 ಮಂಗಳವಾರದಂದು ಬೆಳಿಗ್ಗೆ 7.00 ಗಂಟೆಗೆ ಕೋಟಿ ಪಂಚಾಕ್ಷರಿ ಜಪಯಜ್ಞ ಪ್ರಾರಂಭಗೊಂಡು 11.30 ಕ್ಕೆ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಕೊಂಡೆವೂರು ಇವರಿಗೆ ಪೂರ್ಣಕುಂಭ ಸ್ವಾಗತ ನೆರವೇರಲಿದೆ. ಮಧ್ಯಾಹ್ನ 12.00ಕ್ಕೆ ಪೂರ್ಣಾಹುತಿ ನಡೆದು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಕೊಂಡೆವೂರು ಇವರಿಂದ ಆಶೀರ್ವಚನ ನಡೆಯಲಿದೆ. ಬಳಿಕ ಮಧ್ಯಾಹ್ನ 1.00 ಗಂಟೆಗೆ ಪ್ರಸಾದ ಭೋಜನ ನೆರವೇರಲಿದೆ. ಸಂಜೆ 5ರಿಂದ 6 ಪೇಟೆ ಶ್ರೀ ವೆಂಕಟರಮಣ ಮಹಿಳಾ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ, ಸಂಜೆ 6.00 ಗಂಟೆಗೆ ಶ್ರೀ ವಿದ್ಯಾಧರ ಮಾಸ್ಟರ್ ಇವರಿಂದ ಭಕ್ತಿಗೀತೆ (ಚಲನಚಿತ್ರ ನಿರ್ದೇಶಕರು ಹಾಗೂ 2024ರ ಶ್ರೇಷ್ಠ ಹಿನ್ನೆಲೆ ಗಾಯಕ ಪ್ರಶಸ್ತಿ ಪುರಸ್ಕೃತರು), 8.00 ಗಂಟೆಯಿಂದ ವಿವಿಧ ಭಜನಾ ಸಂಘಗಳಿಂದ ಕುಣಿತ ಭಜನೆ ನಡೆಯಲಿದೆ.

ದಿನಾಂಕ 18-12-2024 ಬುಧವಾರದಂದು ಬೆಳಗ್ಗೆ 7.00 ಗಂಟೆಗೆ ಕೋಟಿ ಪಂಚಾಕ್ಷರಿ ಜಪಯಜ್ಞ ಪ್ರಾರಂಭಗೊಳ್ಳಲಿದೆ. ಬೆಳಗ್ಗೆ 11.30ಕ್ಕೆ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಇವರಿಗೆ ಪೂರ್ಣ ಕುಂಭ ಸ್ವಾಗತ ನಡೆಯಲಿದೆ. ಮಧ್ಯಾಹ್ನ 12.00ಕ್ಕೆ ಪೂರ್ಣಾಹುತಿ ನಡೆಯಲಿದೆ. ಬಳಿಕ ಒಡಿಯೂರು ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಬಳಿಕ ಮಧ್ಯಾಹ್ನ 1 ಗಂಟೆಗೆ ಪ್ರಸಾದ ಭೋಜನ ನಡೆಯಲಿದೆ. ಸಂಜೆ 5 ಗಂಟೆಗೆ ಅಷ್ಟಾವಧಾನ ಸೇವೆಯೊಂದಿಗೆ ಶ್ರೀ ಚಕ್ರಪೂಜೆ ಪ್ರಾರಂಭಗೊಳ್ಳಲಿದೆ. ರಾತ್ರಿ 8.00 ಗಂಟೆಗೆ ಮಹಾಪೂಜೆ ನೆಡೆದ ಬಳಿಕ ಪ್ರಸಾದ ವಿತರಣೆ ನೆರವೇರಲಿದೆ.

19-12-2024 ರಂದು ಬೆಳಗ್ಗೆ 7.00 ಗಂಟೆಗೆ ಕೋಟಿ ಪಂಚಾಕ್ಷರಿ ಜಪಯಜ್ಞ ಪ್ರಾರಂಭಗೊಳ್ಳಲಿದೆ. ಬೆಳಗ್ಗೆ 9.00 ಗಂಟೆಗೆ ರುದ್ರಹೋಮ ಪ್ರಾರಂಭಗೊಳ್ಳಲಿದ್ದು ಬೆಳಗ್ಗೆ 11.30ಕ್ಕೆ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಎಡನೀರು ಮಠ ಇವರ ಉಪಸ್ಥಿತಿಯಲ್ಲಿ ರುದ್ರಹೋಮ ಪೂರ್ಣಾಹುತಿಗೊಳ್ಳಲಿದೆ. ಆ ಬಳಿಕ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಬಳಿಕ 1.00 ಗಂಟೆಗೆ ಪ್ರಸಾದ ಭೋಜನ ನೆರವೇರಲಿದೆ. 3.00 ಗಂಟೆಗೆ ಶ್ರೀ ಕುರುಂಬ ಭಜನಾ ಸಂಘ, ಕಡಪ್ಪುರ ಇವರಿಂದ ಭಜನಾ ಕಾರ್ಯಕ್ರಮ ನಡೆದು ಬಳಿಕ ಸಂಜೆ 5.00ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಪೇಟೆ ಶ್ರೀ ವೆಂಕಟರಮಣ ಮಹಿಳಾ ಭಜನಾ ಮಂಡಳಿ ಸದಸ್ಯರಿಂದ ಪ್ರಾರ್ಥನೆ ಹಾಗೂ ಶ್ರೀ ಹರೀಶ, ಕೆ.ಆರ್., ಪ್ರಧಾನ ಕಾರ್ಯದರ್ಶಿ, ಕೋಟಿ ಪಂಚಾಕ್ಷರಿ ಜಪಯಜ್ಞ ಸಮಿತಿ ಸ್ವಾಗತಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಆಡಳಿತ ಸಮಿತಿಯ ಅಧ್ಯಕ್ಷ ಅಡ್ವ ಗೋವಿಂದ ನಾಯರ್ ವಹಿಸಲಿದ್ದಾರೆ. ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಎಡನೀರು ಮಠ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹಾಗೂ ಮಲಬಾರ್ ದೇವಸ್ವಂ ಬೋರ್ಡ್ ಅಸಿಸ್ಟೆಂಟ್ ಕಮೀಷನರ್
ಪ್ರದೀಪ್ ಕುಮಾರ್ ಹಾಗೂ ಕೋಟಿ ಪಂಚಾಕ್ಷರಿ ಜಪ ಯಜ್ಞ ಅಧ್ಯಕ್ಷ ಡಾ|ಅನಂತ ಕಾಮತ್, ಕಾಸರಗೋಡು ನಗರಸಭಾ ಸದಸ್ಯರುಗಳಾದ ರಮೇಶ್, ಶ್ರೀಲತಾ ಟೀಚರ್, ಕೋಟಿ ಪಂಚಾಕ್ಷರಿ ಜಪ ಯಜ್ಞ ಕಾರ್ಯಾಧ್ಯಕ್ಷರುಗಳಾದ ರಾಮಪ್ರಸಾದ್, ಡಾ.ಕೆ ಎನ್ ವೆಂಕಟರಮಣ ಹೊಳ್ಳ, ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ ಸದಸ್ಯರುಗಳಾದ ಉಷಾ ಅರ್ಜುನ್, ಮನೋಜ್ ಕುಮಾರ್, ತೃಕ್ಕನ್ನಾಡು ಶ್ರೀ ತ್ರಿಯಂಬಕೇಶ್ವರ ಕ್ಷೇತ್ರದ ಅರ್ಚಕ ನವೀನ ಕಾಯರ್ತಯ, ಮಂಗಳೂರು ಕೊಲ್ಯ ಶ್ರೀ ದೇವಿ ಮೂಕಾಂಬಿಕಾ ದೇವಸ್ಥಾನ ಅಧ್ಯಕ್ಷ ಮಧುಸೂದನ, ಉದ್ಯಮಿ ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ, ವಿಟ್ಲ ಮೈತ್ರೇಯಿ ಗುರುಕುಲದ ಜಗನ್ನಾಥ, ಮಹಿಳಾ ಸಮಿತಿ ಅಧ್ಯಕ್ಷೆ ಶಾರದಾ ರಾವ್ ಉಪಸ್ಥಿತರಿರಲಿದ್ದಾರೆ. ಕೋಟಿ ಪಂಚಾಕ್ಷರಿ ಜಪಯಜ್ಞ ಪ್ರಚಾರ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಎಸ್ ವಿ ಟಿ ಧನ್ಯವಾದ ಮಾಡಲಿದ್ದಾರೆ. ದೇವದಾಸ ನುಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ. ಸಂಜೆ 7 ರಿಂದ ಶಬರಿಮಲೆ ಹರಿವರಾಸನಂ ಪ್ರಶಸ್ತಿ ಪುರಸ್ಕೃತ ಕಲೆ ಮಾಮಣಿ ಶ್ರೀ ವೀರಮಣಿ ರಾಜು ಮತ್ತು ಭಕ್ತಿಗಾನ ಗಂಧರ್ವ ಶ್ರೀ ಅಭಿಷೇಕ್ ರಾಜು ಚೆನ್ನೈ ಇವರಿಂದ ಭಕ್ತಿಗಾನ ಸಂಧ್ಯಾ ನಡೆಯಲಿದೆ ಎಂದು ಕೋಟಿ ಪಂಚಾಕ್ಷರಿ ಜಪಯಜ್ಞ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೇವಾ ವಿವರ:

ಕೋಟಿ ಪಂಚಾಕ್ಷರಿ ನಾಮ ಜಪ ಯಜ್ಞ (ಒಬ್ಬರಿಗೆ) ರೂ.100.00, ಶ್ರೀಚಕ್ರಪೂಜೆ (ಒಂದು ಪೂಜೆಗೆ ) ರೂ 250.00, ಶ್ರೀರುದ್ರ ಹೋಮ ರೂ 200.00, ಅನ್ನದಾನ ಸೇವೆ ರೂ 5,000.00, ಉಪಹಾರ ಮತ್ತು ಅನ್ನದಾನ ಸೇವೆ ರೂ 10,000.00

ಸೂಚನೆ:
ವೃತದಾರಿಗಳಾಗ ಬಯಸುವವರು ಯಜನ ಉತ್ಸವದ ಒಂದು ವಾರಕ್ಕೆ ಮುನ್ನ ಮತ್ತು ಒಂದು ವಾರದ ನಂತರ ವರೆಗೆ ಶುದ್ಧ ಸಸ್ಯಹಾರಿ ಸಹಿತ ವ್ರತಧಾರಿಯಾಗಿರಬೇಕು.

ಯಜ್ಞಕ್ಕೆ ಅನಿವಾರ್ಯವಾಗುವ ಸಮಿಧೆ, ತುಪ್ಪ, ತೆಂಗಿನಕಾಯಿ, ಸೀಯಾಳ, ಹಿಂಗಾರ, ಪುಷ್ಪ, ತುಳಸಿ, ಹಲಸಿನ ಕಟ್ಟಿಗೆ ಇತ್ಯಾದಿ ಸಾಮಾಗ್ರಿಗಳು ಹಾಗೂ
ಅನ್ನದಾನ ಮತ್ತು ಉಪಹಾರ ತಯಾರಿಗೆ ಬೇಕಾದ ಧಾನ್ಯ, ತರಕಾರಿ, ಬಾಳೆಗೊನೆ, ಬಾಳೆಎಲೆ, ತೆಂಗಿನಕಾಯಿ, ತುಪ್ಪ ಇತ್ಯಾದಿಗಳನ್ನು ಭಕ್ತಾಧಿಗಳು ನೀಡಬಹುದಾಗಿದೆ.


Share with

Leave a Reply

Your email address will not be published. Required fields are marked *