ಬೆಳ್ಳಂಬೆಳಗ್ಗೆ ಜೈಲಿನಿಂದ ಹೊರಬಂದ ಅಲ್ಲು

Share with

ಹೈದರಾಬಾದ್: ಶುಕ್ರವಾರ ಜೈಲು ಸೇರಿದ್ದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಶನಿವಾರ ಬೆಳಿಗ್ಗೆ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

ಡಿಸೆಂಬರ್ 4 ರಂದು ಸಂಧ್ಯಾ ಥಿಯೇಟರ್ ನಲ್ಲಿ ನಡೆದ ಘಟನೆಗೆ ಸಂಬಂಧಿಸಿ ನಟ ಅಲ್ಲು ಅರ್ಜುನ್ ನನ್ನು ಹೈದರಾಬಾದ್ ನಿವಾಸದಿಂದ ಶುಕ್ರವಾರ(ಡಿ.13) ಬಂಧಿಸಲಾಗಿತ್ತು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಚಿಕ್ಕಡಪಲ್ಲಿ ಪೊಲೀಸರು ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು, ಈ ವೇಳೆ ಕೋರ್ಟ್ ನಟನಿಗೆ ಡಿ. 14 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು ಆ ಬಳಿಕ ನಟನನ್ನು ಚಂಚಲಗುಡ ಜೈಲಿಗೆ ಕರೆತರಲಾಯಿತು.

https://twitter.com/i/status/1867749486245904532

ಇದಾದ ಬಳಿಕ ನಟ ಅಲ್ಲು ಅರ್ಜುನ್ ಹೈಕೋರ್ಟ್ ನಿಂದ ಜಾಮೀನು ಪಡೆದು ಹೊರಬರುವ ಪ್ರಯತ್ನ ನಡೆಸಿದ್ದು ಅದರಂತೆ 50 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಆಧಾರದಲ್ಲಿ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಹೈಕೋರ್ಟ್ ನಿಂದ ಜಾಮೀನು ಸಿಕ್ಕರೂ ಜೈಲು ಅಧಿಕಾರಿಗಳಿಗೆ ಜಾಮೀನು ಪ್ರತಿ ತಲುಪದ ಕಾರಣ ಒಂದು ರಾತ್ರಿ ಜೈಲಿನಲ್ಲಿ ಉಳಿಯುವಂತಾಯಿತು ಅದರಂತೆ ಶನಿವಾರ ಬೆಳಿಗ್ಗೆ ಸುಮಾರು 6;30 ರ ವೇಳೆಗೆ ಚಂಚಲಗುಡ ಜೈಲಿನ ಹಿಂಬದಿ ಗೇಟಿನಿಂದ ಪೊಲೀಸ್ ಭದ್ರತೆಯೊಂದಿಗೆ ಬಿಡುಗಡೆಗೊಂಡು ಹೊರಬಂದಿದ್ದಾರೆ.


Share with

Leave a Reply

Your email address will not be published. Required fields are marked *