
ಮಂಜೇಶ್ವರ: ಶಾರದಾ ಆರ್ಟ್್ಸ ಕಲಾವಿದರು ಮಂಜೇಶ್ವರ ಇದರ ಬೆಳ್ಳಿಹಬ್ಬಸಂಭ್ರಮ ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ದೈವ ಕ್ಷೇತ್ರದ ವಠಾರದಲ್ಲಿ ನಿನ್ನೆಯಿಂದ ಆರಂಭಗೊoಡಿದ್ದು, ನಾಳೆ [19ರಂದು] ಸಮಾಪ್ತಿಗೊಳ್ಳಲಿದೆ. ಶುಕ್ರವಾರ ಬೆಳಿಗ್ಗೆ ಗಣಹೋಮ, ಶಾರದಾ ಪೂಜೆ, ಮಹಾಪೂಜೆ, ಮಂಗಳಾರತಿ ಬಳಿಕ ಬೆಳ್ಳಿಹಬ್ಬ ಸಂಭ್ರಮ ವನ್ನು ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಇವತ್ತಿನ ಕಾಲದಲ್ಲಿ ನಾಟಕ ರಂಗದಲ್ಲಿ ಅನೇಕ ರೀತಿಯ ಬದಲಾವಣೆ ಆಗಿದ್ದು, ಹೊಸ ಅಲೆಯ ನಾಟಕದ ಮೂಲಕ ಸಮಾಜದ ಪ್ರೇಕ್ಷಕರನ್ನು ಸೆಳೆಯುವಲ್ಲಿ ನಾಟಕಗಳು ಬಹಳಷ್ಟು ಪರಿಣಾಮಕಾರಿಯಾಗಿದೆ. ಹೊಸ ಸಂದೇಶಗಳನ್ನು, ಒಳ್ಳೆಯ ಸಂದೇಶಗಳನ್ನು ಸಮಾಜಕ್ಕೆ ನೀಡುವಲ್ಲಿ ನಾಟಕಗಳು ಮಹತ್ವದ ಪಾತ್ರಗಳನ್ನು ವಹಿಸುತ್ತಾ ಇದೆ. ಸಾಮಾಜಿಕ, ಪೌರಾಣಿಕ, ಚಾರಿತ್ರಿಕ ನಾಟಕಗಳಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ಸಿಕ್ತಾ ಇದೆ. ಇನ್ನಷ್ಟು ಒಳ್ಳೆಯ ಕಾರ್ಯಗಳು, ಒಳ್ಳೆಯ ನಾಟಕಗಳು ಶಾರದಾ ಆರ್ಟ್್ಸ ಸಂಸ್ಥೆಯ ಮೂಲಕ ಮತ್ತೆ ಬೆಳಕಿಗೆ ಬರಲಿ ಅದಕ್ಕಾಗಿ ನಾನು ಶುಭವನ್ನು ಹಾರೈಸುತೇನೆ. ಶಾರದ ಆರ್ಟ್್ಸ ತಂಡದ ಎಲ್ಲಾ ಕಲಾವಿದರಿಗೆ , ತಂಡಕ್ಕೆ ಒಳ್ಳೆಯದಾಗಲಿ ಭಗವಂತ ಒಳ್ಳೆಯದು ಮಾಡಲಿ ಎಂಬ ಆಶೀರ್ವಚನವನ್ನು ಅವರು ನೀಡಿದರು. ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡುತ್ತಾ ನಾನು ಕೂಡಾ ತನ್ನ ಎಳೆಯ ಪ್ರಾಯದಲ್ಲಿ ಪೂರ್ವಾಶ್ರಮದ ಸಮಯದಲ್ಲಿ ಅನೆಕ ನಾಟಕಗಳಲ್ಲಿ ಪಾತ್ರದಾರಿಯಾಗಿ ಭಾಗವಹಿಸಿದ್ದೆ. ಅನೇಕ ಪಾತ್ರಗಳನ್ನು ನಿರ್ವಹಿಸಿದ್ದೆ ನಾನು ಕೂಡಾ ಕಲೆಯ ಪ್ರೋತ್ಸಾಹಕ ಹಾಗೂ ಅಭಿಮಾನಿ ಸ್ವತಹ ನಾನು ನಾಟಕರಂಗದಲ್ಲಿ ಇದ್ದ ಕಾರಣ ನಾಟಕದ ಬಗ್ಗೆ ಸಂಫೂರ್ಣ ಮಾಹಿತಿ ನನಗಿದೆ. ತಂಡವನ್ನು ಕಟ್ಟಿ ಬೆಳುವಲ್ಲಿ ಅದರ ಕಷ್ಟ ನಷ್ಟಗಳು ಅದರ ಸಿಹಿ ಕಹಿಗಳೆಲ್ಲನನಗೆ ಅನುಭವಕ್ಕೆ ಇದೆ. ಅದರಿಂದಾಗಿ ಕೃಷ್ಣಣ್ಣನವರು ಮಾಡುವಂತ ಅವರ ಈ ತಂಡದ ಶ್ರಮ ನನಗೆ ಗೊತ್ತಿದೆ. ಅವರ ಪ್ರತಿಯೊಂದು ನಾಟಕದಲ್ಲಿ ಕೂಡಾ ಆಶೀರ್ವಚನ ವೇದಿಕೆಗೆ ನಾನು ಬರುತ್ತಾ ಇದ್ದೇನೆ. ಎಲ್ಲಾ ನಾಟಕಗಳು ಕೂಡಾ ಉತ್ತಮ ನಾಟಕಗಳಾಗಿ ಮೂಡಿಬಂದು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವಂತ ನಾಟಕಗಳಾಗಿ ಮೂಡಿಬಂದಿದೆ. ಇನ್ನಷ್ಟು ಒಳ್ಳೆಯ ನಾಟಕಗಳು ಅವರಿಂದ ಮೂಡಿ ಬರಲಿ 25 ವರ್ಷದ ಈ ಸಮಾರಂಭದAತೆ ಮುಂದೆ 50ವರ್ಷ ಸಮಾರಂಭ ಕೂಡಾ ನಡೆಯಲಿ ಎಂದು ಆಶೀರ್ವಚನದಲ್ಲಿ ಹೇಳಿದರು. ಉದ್ಯಾವರ ಮಾಡ ಕ್ಷೇತ್ರದ ಅಡಳಿತ ಮೋಕ್ತೇಸರ ಕಿರಣ್ ಶೆಟ್ಟಿ ಮಾಡ ಅಧ್ಯಕ್ಷತೆ ವಹಿಸಿದರು. ಮಾಡ ಕ್ಷೇತ್ರ ತಮ್ಮ ದೈವದ ಅರ್ಚಕರಾದ ಬೀರು ಚೌಟ, ತಮ್ಮ ದೈವದ ಪಾತ್ರಿ ತಿಮಿರಿ ಬೆಳ್ಚಪ್ಪಾಡ, ಮಾಡ ಕ್ಷೇತ್ರದ ಮುಂಡಲ್ತಾಯ ದೈವದ ಪಾತ್ರಿ ಮಂಜು ಬೆಳ್ಚಪ್ಪಾಡ, ಕನಿಲ ಭಗವತೀ ಕ್ಷೇತ್ರದ ಉದಯ ಆತಾರ್, ಎಸ್.ಎನ್ ಕಡಂಬಾರು, ಕೃಷ್ಣ ಶಿವಕೃಪಾ ಕುಂಜತ್ತೂರು, ಜಯರಾಮ ಶೆಟ್ಟಿ ಕಜೆಕೋಡಿ, ಪದ್ಮನಾಭ ಕಡಪ್ಪರ, ಶೇಖರ್ ಕನೀರ್ ತೋಟ, ಆಷಾ ಶೆಟ್ಟಿ ಅತ್ತಾವರ, ತಮ್ಮ ಲಕ್ಷ್ಮಣ್ , ದಯಾಕರ ಮಾಡ, ತಿಲಕ್ ಪ್ರಸಾದ್ ಕಡೆಕಳಕಟ್ಟೆ, ನರೇಂದ್ರ ಹೆಗ್ಡೆ ಹೊಸಂಗಡಿ, ರವಿ ಮುಡಿಮಾರ್, ಕೃಷ್ಣಪ್ಪ ಪೂಜಾರಿ ಬಡಾಜೆ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಂಜುನಾಥ ಅಡಪ ಸಂಕಬೈಲು, ಲೀಲಾವತಿ ಕೇಶವ, ನಾಗಮ್ಮ ಪೊಯ್ಯಕಂಡ, ಉಷಾ ಸದಾನಂದ ಆರಿಕ್ಕಾಡಿ, ರಾಜೇಶ್ ಮಂಜೇಶ್ವರ, ನಾಗರಾಜ್ ರಾವ್ ವರ್ಕಾಡಿ ಇವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಮಾತೆಯರು ಪ್ರಾರ್ಥನೆ ಹಾಡಿದರು. ನ್ಯಾಯವಾದಿ ಗಂಗಾಧರ ಕೊಂಡೆವೂರು ಸ್ವಾಗತಿಸಿದರು. ದಿನಕರ ಹೊಸಂಗಡಿ ನಿರೂಪಣೆ ಹಾಗೂ ದನ್ಯವಾದ ಕಾರ್ಯಕ್ರಮನ್ನು ನಡೆಸಿಕೊಟ್ಟರು.





