Kasaragod: ಮಾನ್ಯ ಗೊಲ್ಲ ಸಮಾಜದ ಸಂಗಮ ಕಾರ್ಯಕ್ರಮ

Share with

ಕಾಸರಗೋಡು: ಮಾನ್ಯ ಗೊಲ್ಲ ಸಮಾಜವು ತನ್ನದೇ ಆದ ಆಚಾರ ವಿಚಾರಗಳನ್ನು ಹೊಂದಿದ್ದು ಅದನ್ನು ಮುಂದುವರಿಸುವ ಜೊತೆಗೆ ಸಮಾಜವನ್ನು ಇನ್ನಷ್ಟು ಸದೃಢಗೊಳಿಸುವ ಅವಶ್ಯಕತೆ ಇದೆ ಎಂಬ ಆಶಯದೊಂದಿಗೆ ಗೊಲ್ಲ ಸಮಾಜ ಸಂಘ ಮಾನ್ಯ ಇದರ ಆಶ್ರಯದಲ್ಲಿ ಗೊಲ್ಲ ಸಮಾಜ ಸಂಗಮ ಕಾರ್ಯಕ್ರಮ ಮಾನ್ಯ ಶ್ರೀ ವೆಂಕಟ್ರಮಣ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.

ಈ ಕಾರ್ಯಕ್ರಮಕ್ಕೆ ರಾಮದಾಸ ರವರು ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಆಡಳಿತಾಧ್ಯಕ್ಷ ಅಡ್ವ. ಮೋಹನ್ ಮಾನ್ಯ ವಹಿಸಿದರು.

ವೇದಿಕೆಯಲ್ಲಿ ರಾಮದಾಸ್ ಮಾನ್ಯ, ಉಮಾನಾಥ ಕಾಸರಗೋಡು, ಜನಾರ್ಧನ ಎಂ ಎಚ್, ನಿರಂಜನ್ ಮಾನ್ಯ, ಉಪಸ್ಥಿತರಿದ್ದು ಶುಭಾಶಂಸನೆ ನೀಡಿದರು. ನವೀನ್ ಚಂದ್ರ ಮಾಸ್ತರ್ ಮಾನ್ಯ ಪ್ರಾಸ್ತಾವನೆಯೊಂದಿಗೆ ಕಾರ್ಯಕ್ರಮಕ್ಕೆ ಸ್ವಾಗತಿಸಿ, ಯೋಗೀಶ್ ಗೊಲ್ಲ ವಂದಿಸಿದರು. ಮಂಜುನಾಥ ಡಿ ಮಾನ್ಯ ನಿರೂಪಿಸಿದರು. ಗೀತಾ ಈಶ್ವರ ಮತ್ತು ಜಯಲಕ್ಷ್ಮಿ ಸಿ ಎಚ್ ರವರು ಪ್ರಾರ್ಥನೆ ಹಾಡಿದರು.


Share with

Leave a Reply

Your email address will not be published. Required fields are marked *