ಮೊದಲ 6 ತಿಂಗಳು ಮಗುವಿಗೆ ಹಾಲುಣಿಸಿ ಬೆಳೆಸುವ ಪೋಷಕರು, ನಂತರ ಬಿಸ್ಕತ್‌ನಂತಹ ತಿನಿಸು ಕೊಡಲು ಆರಂಭಿಸುತ್ತಾರೆ. ಬಿಸ್ಕತ್ತನ್ನು ಮೈದಾ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇವು ಯಾವುದೇ ಆರೋಗ್ಯಕರ ಕ್ಯಾಲೊರಿಗಳನ್ನು ಒದಗಿಸುವುದಿಲ್ಲ.

ಬಿಎಚ್‌ಎ ಎನ್ನುವ ಪ್ರಿಸರ್ವೇಟೀವ್‌ಗಳು ಬಿಸ್ಕತ್ತುಗಳಲ್ಲಿ ಕಂಡುಬರುತ್ತವೆ. ಇವು ರಕ್ತಕ್ಕೆ ಹಾನಿ ತರುತ್ತವೆ. ಬೇಕಿಂಗ್ ಸೋಡಾವನ್ನು ಬಿಸ್ಕತ್ತುಗಳಿಗೆ ಸೇರಿಸಲಾಗುತ್ತದೆ, ಇದರಿಂದಾಗಿ ಅಂಬೆಗಾಲಿಡುವ ಮಕ್ಕಳು ಆಸಿಡ್ ರಿಫ್ಲಕ್ಸ್ ಸಮಸ್ಯೆಗೆ ಒಳಗಾಗಬಹುದು. ಹಾಗಾಗಿ ಹೆಚ್ಚು ಪ್ರಮಾಣದಲ್ಲಿ ಮಕ್ಕಳಿಗೆ ಬಿಸ್ಕತ್ ನೀಡುವುದು ಒಳ್ಳೆಯದಲ್ಲ.




