ರಾಷ್ಟ್ರೀಯ ಹೆದ್ದಾರಿಗಳಲ್ಲೂ ದ್ವಿಚಕ್ರ ವಾಹನ ಸವಾರರು ಸಹ ಜುಲೈ.15ರಿಂದ ಟೋಲ್ ಶುಲ್ಕ ಪಾವತಿಸಬೇಕು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದು, ಇದು ಸುಳ್ಳು ಸುದ್ದಿ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಂದು ಸ್ಪಷ್ಟಿಕರಣ ನೀಡಿದೆ.

ಬೈಕ್ಗಳಿಗೂ ಯಾವುದೇ ಟೋಲ್ ಶುಲ್ಕ ವಿಧಿಸುತ್ತಿಲ್ಲ. ಕೆಲವು ಮಾಧ್ಯಮಗಳಲ್ಲಿ ಬಂದ ಎಲ್ಲಾ ವರದಿಗಳು ಸುಳ್ಳು ಎಂದು NHAI ಪರಿಗಣಿಸಿದೆ. ಇದಲ್ಲದೆ, ಅಂತಹ ಯಾವುದೇ ಪ್ರಸ್ತಾಪ ಸಹ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದೆ.




