ಧರ್ಮಸ್ಥಳ: ಹೆಣ ಹೂತಿಟ್ಟಿದ್ದೇನೆಂದು ಹೇಳಿರುವ ವ್ಯಕ್ತಿ ಗುರುತಿಸಿದ ಮೊದಲ ಜಾಗದಲ್ಲಿ ಪತ್ತೆಯಾಗಿದ್ದ ಡೆಬಿಟ್ ಕಾರ್ಡ್ ಮಹಿಳೆಯದ್ದು ಎಂದು ಹೇಳಲಾಗಿದೆ.

ಪ್ಯಾನ್ ಕಾರ್ಡ್ ಹೋಲ್ಡರ್ ನ ತಾಯಿಯ ಡೆಬಿಟ್ ಕಾರ್ಡ್ ಎಂದು ಎಸ್. ಐ. ಟಿ ಮೂಲಗಳು ಪತ್ತೆ ಹಚ್ಚಿವೆ.
2025ರಲ್ಲಿ ಸತ್ತ ಪುರುಷನ ಪ್ಯಾನ್ ಕಾರ್ಡ್ ಎಂದು ಗೊತ್ತಾದ ಬೆನ್ನಲ್ಲೇ, ಸಿಕ್ಕಿರುವ ಮತ್ತೊಂದು ಮಹಿಳೆಯ ಡೆಬಿಟ್ ಕಾರ್ಡ್ ಆತನ ತಾಯಿಯದ್ದು ಎನ್ನಲಾಗಿದೆ. ತಾಯಿ ಈಗಲೂ ಜೀವಂತವಾಗಿದ್ದು, ಅವರನ್ನು ಎಸ್. ಐ. ಟಿ ಅಧಿಕಾರಿಗಳು ಸಂಪರ್ಕಿಸಿದ್ದಾರೆ ಎಂದು ಹೇಳಲಾಗಿದೆ.




