ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದಲ್ಲಿ ದಶಕಗಳ ಹಿಂದೆ ಅತ್ಯಾಚಾರಕ್ಕೆ ಈಡಾಗಿ ಕೊಲೆಯಾದ ಪದ್ಮಲತಾಳ ಸಹೋದರಿ ಸೋಮವಾರ ಪದ್ಮಲತಾ ಪ್ರಕರಣದ ಬಗ್ಗೆ ಮರುತನಿಖೆ ನಡೆಸುವಂತೆ ದೂರು ನೀಡಲು ಬೆಳ್ತಂಗಡಿ ಯ ಎಸ್.ಐ.ಟಿ ಕಚೇರಿಗೆ ಸೋಮವಾರ ಆಗಮಿಸಿದ್ದಾರೆ.

ಪದ್ಮಲತಾಳ ಅಕ್ಕ ಇಂದ್ರಾವತಿ ಅವರು ಸಿಪಿಐಎಂ ಪಕ್ಷದ ಮುಖಂಡರಾದ ಬಿ.ಎಂ ಭಟ್ ಹಾಗೂ ಇತರರೊಂದಿಗೆ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದಾರೆ.
ಎಸ್. ಐ.ಟಿ ಠಾಣೆಗೆ ತಂಡದ ಹಿರಿಯ ಅಧಿಕಾರಿಗಳು ಆಗಮಿಸಿದ ಬಳಿಕ ಅವರಿಗೆ ದೂರು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.




