ಕಾಞಂಗಾಡು -ಸುಳ್ಯ ಮಾರ್ಗದಲ್ಲಿ ಕೇರಳ KSRTC ಬಸ್ ಸಂಚಾರ ಆರಂಭ

Share with

ಕಾಸರಗೋಡು : ಬಂದಡ್ಕ ಭಾಗದ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ ಕಾಞಂಗಾಡು -ಸುಳ್ಯ ರೂಟಿನಲ್ಲಿ ಕೇರಳ ಕೆಎಸ್ಸಾರ್ಟೀಸಸಿ ಯ ಲಿಮಿಟೆಡ್ ಸ್ಟಾಪ್ ಆ. 14ರಂದು ಸಂಚಾರ ಆರಂಭಿಸಿತು.

ಕಾಞಂಗಾಡು, ಪೆರಿಯ, ಮೂನಾಂಕಡವ್, ಕುಂಡಾಂಗುಳಿ, ಬಂದಡ್ಕ ದಾರಿಯಾಗಿ ಸುಳ್ಯಕ್ಕೆ ಸರ್ವೀಸ್ ನಡೆಸುವ ಬಸ್‌ ಸಂಚಾರವನ್ನು ಶಾಸಕ ಸಿ. ಎಚ್. ಕುಂಞಂಬು ಆ.14 ರಂದು ಬೆಳಿಗ್ಗೆ ಕುತ್ತಿಕ್ಕೋಲ್ ನಲ್ಲಿ ಸಂಚಾರ ಉದ್ಘಾಟಿಸಿದರು.

ಮಲೆನಾಡು ಪ್ರದೇಶವಾದ ಕುತ್ತಿಕೋಲ್, ಬೇಡಗಂ ಪಂಚಿಯತಿನ ಜನತೆಗೆ ಈ ಬಸ್ ಸಂಚಾರದ ಮೂಲಕ ಅತಿ ಸುಲಭದಲ್ಲಿ ಸುಳ್ಯವನ್ನು ಸಂಪರ್ಕಿಸಬಹುದಾಗಿದೆ.

ಚಿಕಿತ್ಸೆ, ಉನ್ನತಶಿಕ್ಷಣ, ವಾಣಿಜ್ಯ ವ್ಯವಹಾರ ಇನ್ನಿತರೆ ಅಗತ್ಯಕ್ಕೆ ಈ ಭಾಗದ ಗಡಿ ಜನತೆ ಸುಳ್ಯವನ್ನು ಆಶ್ರಯಿಸುತ್ತಿದ್ದರರು. ಈ ಹಿನ್ನೆಲೆಯಲ್ಲಿ ಕೇರಳ ಸರಕಾರೀ ಬಸ್ ಸಂಚಾರ ಆರಂಭಿಸುವಂತೆ ನಾಗರಿಕರು ಒತ್ತಾಯಿಸಿದ್ದರು. ವರ್ಷದ ಹಿಂದೆ ಬಂದಡ್ಕದಲ್ಲಿ ಅರೆಭಾಷೆ ಸಮ್ಮೇಳನದ ವೇಳೆ ಈ ಕುರಿತು ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು. ಈ ಸಂದರ್ಭ ಶಾಸಕ ಸಿ. ಎಚ್. ಕುಞಂಬು ಬಸ್‌ ಆರಂಭಿಸುವ ಭರವಸೆ ನೀಡಿದ್ದರು.


Share with

Leave a Reply

Your email address will not be published. Required fields are marked *