ಕನ್ಯಾಡಿ: ಸೇವಕ್ ಸರ್ವಿಸಸ್ ಸಂಸ್ಥೆ ಕಾರ್ಯಾರಂಭ

Share with

ಕನ್ಯಾಡಿ: (ಆ.27) ಸಚಿನ್ ಗೌಡ ಕಲ್ಮಂಜ ಅವರ ಮಾಲೀಕತ್ವದ ಪ್ರತಿಷ್ಠಿತ ಸೇವಕ್ ಸರ್ವಿಸಸ್ ಸಂಸ್ಥೆ ಆ.27ರಂದು ಭವ್ಯವಾಗಿ ಉದ್ಘಾಟನೆಯಾಯಿತು. ಶ್ರೀನಿವಾಸ್ ರಾವ್ ಹಾಗೂ ಸುದರ್ಶನ್ ಕನ್ಯಾಡಿ ಅವರು ರಿಬ್ಬನ್ ಕತ್ತರಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿದರು. ಕಟ್ಟಡದ ಮಾಲಕರಾದ ಗಣೇಶ್ ಕೆ.ವಿ ದೀಪ ಬೆಳಗಿಸಿ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಅವರು ಸಂಸ್ಥೆಗೆ ಭೇಟಿ ನೀಡಿ ಶುಭ ಹಾರೈಸಿದರು.

ಮಾಲಕರಾದ ಸಚಿನ್ ಗೌಡರ ತಂದೆ ಹೊನ್ನಪ್ಪ ಗೌಡ ಹಾಗೂ ತಾಯಿ ರತ್ನಾವತಿ ಉಪಸ್ಥಿತರಿದ್ದರು. ಅತಿಥಿಗಳಾಗಿ ಸಿ.ಎಚ್. ಪ್ರಭಾಕರ್, ಸುಂದರ ಗೌಡ ಬಜಿಲ, ಗಣೇಶ್ ಬಜಿಲ, ಗೋವಿಂದ ಸುವರ್ಣ ಪೊಂಗಾರು, ವಿಶ್ವನಾಥ್ ಗೌಡ ಕನ್ನಿಕಾ, ನಿತಿನ್ ಗೌಡ ಕಲ್ಮಂಜ, ಗ್ರೇ ಸ್ಟೋನ್ಸಂಸ್ಥೆಯ ರಂಜಿತ್, ಚೇತನ್ ಅಲೆಕ್ಕಿ, ವಿಶು ದೊಂಡೋಲೆ, ಶಿವಪ್ರಸಾದ್, ಕಂಪ್ಯೂಟರ್ ಆಪರೇಟರ್ ಚೈತ್ರ ಮತ್ತು ಅನೇಕರು ಭಾಗವಹಿಸಿದ್ದರು.


Share with