ವೆಸ್ಟ್ ಇಂಡೀಸ್‌ನ ಲೆಜೆಂಡರಿ ಕ್ರಿಕೆಟಿಗ ಬರ್ನಾರ್ಡ್ ಜೂಲಿಯನ್ ನಿಧನ

Share with

ಭಾರತ ಮತ್ತು ವೆಸ್ಟ್ ಇಂಡೀಸ್ (India vs West Indies) ನಡುವಿನ ಟೆಸ್ಟ್ ಸರಣಿಯ ನಡುವೆ ಕ್ರಿಕೆಟ್ ಲೋಕಕ್ಕೆ ನೋವಿನ ಸುದ್ದಿಯೊಂದು ಎದುರಾಗಿದೆ. ವೆಸ್ಟ್ ಇಂಡೀಸ್‌ನ ದಂತಕಥೆ ಕ್ರಿಕೆಟಿಗ ಬರ್ನಾರ್ಡ್ ಜೂಲಿಯನ್ (Bernard Julien) ತಮ್ಮ 75 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.1975 ರಲ್ಲಿ ಮೊದಲ ಏಕದಿನ ವಿಶ್ವಕಪ್ ಗೆದ್ದ ಕೆರಿಬಿಯನ್ ತಂಡದ ಸದಸ್ಯರಾಗಿದ್ದ ಬರ್ನಾರ್ಡ್ ಜೂಲಿಯನ್, ಆ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಗೆಲುವಿನಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಗುಂಪು ಹಂತದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 20 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದಿದ್ದ ಬರ್ನಾರ್ಡ್, ಆ ಬಳಿಕ ನಡೆದಿದ್ದ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧವೂ ಕೇವಲ 27 ರನ್‌ ನೀಡಿ ಪ್ರಮುಖ 4 ವಿಕೆಟ್‌ಗಳನ್ನು ಉರುಳಿಸಿದ್ದರು. ಇದಲ್ಲದೆ, 1975 ರ ವಿಶ್ವಕಪ್‌ನ ಫೈನಲ್‌ನಲ್ಲಿಯೂ ಮಿಂಚಿನ ಪ್ರದರ್ಶನ ನೀಡಿದ್ದ ಅವರು ಆಸ್ಟ್ರೇಲಿಯಾ ವಿರುದ್ಧ 37 ಎಸೆತಗಳಲ್ಲಿ 26 ರನ್‌ ಬಾರಿಸುವ ಮೂಲಕ ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸಂತಾಪ ಸೂಚಿಸಿದ ಕ್ರಿಕೆಟ್ ವೆಸ್ಟ್ ಇಂಡೀಸ್
ಬರ್ನಾರ್ಡ್ ಜೂಲಿಯನ್ ಅವರ ನಿಧನಕ್ಕೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಸಂತಾಪ ಸೂಚಿಸಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು ಬರ್ನಾರ್ಡ್ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ವೆಸ್ಟ್ ಇಂಡೀಸ್ ಕ್ರಿಕೆಟ್‌ಗೆ ಬರ್ನಾರ್ಡ್ ಜೂಲಿಯನ್ ನೀಡಿದ ಕೊಡುಗೆಯನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಹೇಳಿದೆ.


Share with

Leave a Reply

Your email address will not be published. Required fields are marked *