ತಿರುವನಂತಪುರ ಮಹಾನಗರಪಾಲಿಕೆಯ ಬಿಜೆಪಿ ಕೌನ್ಸಿಲರ್ ನೇಣಿಗೆ ಶರಣು

Share with

ತಿರುವನಂತಪುರ : ತಿರುವನಂತಪುರ ಮಹಾನಗರಪಾಲಿಕೆಯ ತಿರುಮಲ ವಾರ್ಡಿನ ಬಿಜೆಪಿ ಕೌನ್ಸಿಲರ್ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನ್ನೂ‌ರ್ ನಿವಾಸಿ ಕೆ. ಅನಿಲ್‌ ಕುಮಾರ್ (52)ಮೃತ ವ್ಯಕ್ತಿ.

ತಾನು ಮಾನಸಿಕ ತೊಂದರೆಯಿಂದ ಬಳಲುತ್ತಿದ್ದೇನೆ ಎಂದು ಆತ್ಮಹತ್ಯೆ ಗೆ ಕಾರಣಸೂಚಿಸಿದ ಚೀಟಿ ಮೃತ ದೇಹದ ಬಳಿ ಪತ್ತೆಯಾಗಿದೆ. ಆತ್ಮಹತ್ಯೆಗೆ ಪಕ್ಷವೂ ಕಾರಣವೆಂಬ ಸೂಚನೆ ಚೀಟಿಯಲ್ಲಿದೆ.

ಅನಿಲ್ ನೇತೃತ್ವ ನೀಡುವ ಸಹಕಾರಿ ಬ್ಯಾಂಕ್ ಆರ್ಥಿಕವಾಗಿ ವೈಫಲ್ಯ ಅನುಭವಿಸಿ ಕುಸಿದಿತ್ತು. ಈ ವಿಷಯದಲ್ಲಿ ಪಕ್ಷ ಹಸ್ತಕ್ಷೇಪ ನಡೆಸಿ ಸಹಕರಿಸದೇ ಇರುವ ಹಿನ್ನೆಲೆಯಲ್ಲಿ ಮಾನಸಿಕ ಸಂಘರ್ಷದಿಂದ ಆತ್ಮಹತ್ಯೆ ನಡೆದಿದೆ ಎಂಬ ಆರೋಪ ಕೇಳಿ ಬರುತ್ತಿವೆ.


Share with

Leave a Reply

Your email address will not be published. Required fields are marked *