ತಿರುವನಂತಪುರ : ಕೇರಳದ ಸ್ಥಳೀಯಾಡಳಿತ ಚುನಾವಣಾ ಪ್ರಕ್ರಿಯೆ ಡಿಸೆಂಬರ್ 20ರೊಳಗೆ ಪೂರ್ಣಗೊಳಿಸುವಂತೆ ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ಇನ್ನೊಂದು ಸುತ್ತಿನ ಮತದಾರರ ಯಾದಿ ಪರಿಷ್ಕರಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಕೇರಳದ ಸ್ಥಳೀಯಾಡಳಿತ ಚುನಾವಣೆ ನವಂಬರ್ ಕೊನೆಗೆ ಅಥವಾ ಡಿಸೆಂಬರ್ ಮೊದಲ ಭಾಗದಲ್ಲಿ ನಡೆಯುವ ಸೂಚನೆಯನ್ನು ಆಯೋಗ ನೀಡಿದೆ.

ರಾಜ್ಯದ ಮುಖ್ಯ ಚುನಾವಣಾಧಿಕಾರಿ ರತನ್ ಯು. ಖೇಲ್ಕರ್ ಹಾಗೂ ರಾಜ್ಯದ ಚುನಾವಣಾ ಆಯುಕ್ತ ಎ. ಷಾಜಹಾನ್ ಅವರು ಸ್ಥಳೀಯಾಡಳಿತ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿ ಇಂದು ಸಭೆ ಸೇರಿದ್ದಾರೆ. ಕೇರಳದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯನ್ನು ತ್ರಿಸ್ತರ ಪಂ. ಚುನಾವಣೆಯ ಬಳಿಕ ನಡೆಸಿದರೆ ಸಾಕೆಂದು ಕೇಂದ್ರ ಆಯೋಗಕ್ಕೆ ಈಗಾಗಲೇ ಶಿಫಾರಸು ಮಾಡಿರುವ ಕೇರಳ ರಾಜ್ಯ ಆಯೋಗ ಇದೀಗ ಸ್ಥಳೀಯಾಡಳಿತ ಚುನಾವಣೆಗೆ ಸಜ್ಜಾಗುತ್ತಿದೆ.




