ತಿರುವನಂತಪುರ : ಕೇರಳ ವ್ಯಾಪಕ ಎಲ್ಲಾ ಜಿಲ್ಲೆಗಳಲ್ಲೂ ಸ್ಥಳೀಯಾಡಳಿತ ಚುನಾವಣಾ ಪೂರ್ವ 15ದಿನಗಳ ಗೃಹ ಸಂಪರ್ಕ ಕಾರ್ಯಕ್ರಮಕ್ಕೆ ಸೆ.26ರಂದು ಚಾಲನೆ ನೀಡಲಾಯಿತು.

ಗೃಹ ಸಂಪರ್ಕದ ಮೂಲಕ ಬಿಜೆಪಿ ‘ವಿಕಸಿತ ಕೇರಳಂ’ ಸಂದೇಶವನ್ನು ಎಲ್ಲಾ ಮನೆಗಳಿಗೆ ಮತ್ತು ಜನಮಾನಸಕ್ಕೆ ತಲುಪಿಸುವುದು ಪಕ್ಷದ ಯೋಜನೆಯಾಗಿದೆ. ತಿರುವನಂತಪುರದ ರಾಜಾಜಿನಗರದಲ್ಲಿ ನಡೆದ ರಾಜ್ಯ ಮಟ್ಟದ ಗೃಹಸಂಪರ್ಕ ಅಭಿಯಾನವನ್ನು ಪಕ್ಷದ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಉದ್ಘಾಟಿಸಿದರು.
ಕೇರಳದ ಜನತೆ ರಾಜಕೀಯ ಬದಲಾವಣೆ ಬಯಸುತ್ತಿದ್ದಾರೆ. ಸಾಮಾಜಿಕ ಅಭಿವೃದ್ಧಿ ಬಯಸುತ್ತಿದ್ದಾರೆ. ಈ ಬದಲಾವಣೆ ತರಲು ವಿಕಸಿತ ಕೇರಳವನ್ನಿಲ್ಲಿ ಸೃಷ್ಟಿಸಬೇಕಾಗಿದೆ. ಇದು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಜವಾಬ್ದಾರಿಯಾಗಿದೆ. ಬಿಜೆಪಿ ಕಾರ್ಯಕರ್ತರು ಪ್ರತಿ ಮನೆ, ಮನೆ ಸಂದರ್ಶಿಸಿ ಪಕ್ಷದ ವಿಕಸಿತ ಕೇರಳ ಯೋಜನೆ ಜನತೆಗೆ ತಿಳಿಸಬೇಕು. ಬಿಜೆಪಿ ಮುಂದಿಡುವ ಆಶಯ ಸಮಾಜದಲ್ಲಿ ಚರ್ಚೆಯಾಗಬೇಕು ಎಂದವರು ಹೇಳಿದರು.
ಕಳೆದ 75ವರ್ಷಗಳ ಎಡ -ಬಲ ರಂಗಗಳ ಆಡಳಿತದಿಂದ ಕೇರಳದಲ್ಲುಂಟಾದ ಅಭಿವೃದ್ಧಿ ಕುಂಠಿತ ಪರಿಸ್ಥಿತಿ ಮತ್ತು ಆಡಳಿತ ವೈಫಲ್ಯಗಳನ್ನು ಜನರಿಗೆ ಮನದಟ್ಟು ಮಾಡುವುದೆ ಗೃಹಸಂಪರ್ಕದ ಉದ್ದೇಶ ಎಂದು ರಾಜೀವ್ ಚಂದ್ರಶೇಖರ್ ಹೇಳಿದರು. ಇದರಂತೆ ಕಾಸರಗೋಡು ಜಿಲ್ಲಾ ಮಟ್ಟದ ಗೃಹಸಂಪರ್ಕವನ್ನು ರಾಜ್ಯ ಕಾರ್ಯದರ್ಶಿ ಎಂ. ಟಿ. ರಮೇಶ್ ಉದ್ಘಾಟಿಸಿದರು.15ದಿನಗಳ ಪರ್ಯಂತ ಎಲ್ಲಾ ವಾರ್ಡಿನಲ್ಲೂ ಗೃಹ ಸಂಪರ್ಕ ಯಜ್ಞಕ್ಕೆ ಪಕ್ಷ ಕರೆ ನೀಡಿದೆ.




