ಕುಂಬಳೆ: ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅ.1ರಂದು ಬೆಳಿಗ್ಗೆ ಕಾರು ಢಿಕ್ಕಿ ಹೊಡೆದು ಮಧ್ಯವಯಸ್ಕ ಮೃತಪಟ್ಟ ಘಟನೆ ನಡೆದಿದೆ.

ತಮಿಳುನಾಡು ಉಲುಂದುಲ್ ಪೇಟೆ ವಿಲ್ಲುಪುರಂನ ವೇಲಾಯುಧಂ (56) ಮೃತಪಟ್ಟ ವ್ಯಕ್ತಿ. ಅ.1ರಂದು ಬೆಳಿಗ್ಗೆ 7.45ರ ವೇಳೆ ಕಾಸರಗೋಡು ಭಾಗ ದಿಂದ ಮಂಗಳೂರಿನತ್ತ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿದ ಕಾರು ರಾಷ್ಟ್ರೀಯ ಹೆದ್ದಾರಿ ಬದಿ ನಿಂತಿದ್ದ ವೇಲಾಯು ಧಕರಿಗೆ ಢಿಕ್ಕಿ ಹೊಡೆದಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಢಿಕ್ಕಿಯ ಆಘಾತದಿಂದ ಸರ್ವೀಸ್ ರಸ್ತೆಗೆಸೆ ಯಲ್ಪಟ್ಟು ಗಂಭೀರ ಗಾಯಗೊಂಡ ವೇಲಾಯುಧಂರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಕಾಞಂಗಾಡ್ ಕ್ವಾರ್ಟಸ್್ರನಲ್ಲಿ ವಾಸಿಸುತ್ತಿದ್ದ ಇವರು ಮೀನುಗಾರಿಕೆಗೆ ತೆರಳುವವರೊಂದಿಗೆ ಹೋಗುತ್ತಿದ್ದರೆನ್ನಲಾಗಿದೆ.
ಮೃತರು ಮಾರ್ಕಂ ಡನ್-ನಲ್ಲತ್ತಾಳ್ ದಂಪತಿಯ ಪುತ್ರನಾದ ಮೃತರು ಸಹೋದರ-ಸಹೋದರಿ ಯರಾದ ಏಳುಮಲೈ, ಸಂಧ್ಯ, ಪೊನ್ನನ್, ಕೋದಾಂಬರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.




