ಈಗಿನ ಕಾಲದಲ್ಲಿ ತಿಂಗಳಿಗೆ ಲಕ್ಷಾಂತರ ರೂಪಾಯಿ ದುದಿದ್ರೂ ಸಾಕಾಗಲ್ಲ, ಕಡಿಮೆ ಸಂಬಳವಿದ್ರಂತೂ ಖರ್ಚುಗಳೆಲ್ಲವನ್ನು ನೀಗಿಸಿ ಉಳಿತಾಯ ಮಾಡುವುದೇ ದೊಡ್ಡ ಹರಸಾಹಸ. ಹೀಗಿರುವಾಗ ಸಿಎ ಮೀನಾಯ್ ಗೋಯೆಲ್ (Minel Goel) ಅವರು ಬೆಂಗಳೂರಿನಿಂದ ಗುರುಗಾಂವ್‌ಗೆ ಸ್ಥಳಾಂತರಗೊಂಡಿದ್ದು, ಇದು ದೊಡ್ಡ ಮಟ್ಟಿಗೆ ಆರ್ಥಿಕ ಹೊಡೆತ ತಂದೊಡ್ಡಿದೆಯಂತೆ. ಬೆಂಗಳೂರಿಗೆ ಹೋಲಿಸಿದ್ರೆ ಗುರುಗಾಂವ್‌ನಲ್ಲಿ (Bengaluru VS Gurgaon) ಮಾಸಿಕ ಖರ್ಚು ವೆಚ್ಚ 10000 ರೂ ಹೆಚ್ಚಾಗಿದೆ. ಅದೇ ಕೆಲಸ, ಅದೇ ವೇತನ, ಆದ್ರೆ ಖರ್ಚು ಮಾತ್ರ ಹೆಚ್ಚು. ಇಲ್ಲಿನ ಜೀವನ ನಿಜಕ್ಕೂ ಕಷ್ಟಕರ ಎಂದು ವಾಸ್ತವತೆಯನ್ನು ಒಪ್ಪಿಕೊಂಡಿದ್ದಾರೆ.
ಗುರುಗಾಂವ್ ಇಷ್ಟೊಂದು ದುಬಾರಿ ಯಾಕೆ?
ಸಿಎ ಮೀನಾಯ್ ಗೋಯೆಲ್ ಗುರುಗಾಂವ್‌ಗೆ ಸ್ಥಳಾಂತರಗೊಂಡಾಗ ಅಲ್ಲಿನ ಖರ್ಚು ವೆಚ್ಚಗಳು ಹೇಗೆ ಬದಲಾದವು ಎಂದು ಲಿಂಕ್ಡ್ ಇನ್‌ನಲ್ಲಿ ವಿವರಿಸಿದ್ದಾರೆ. ಗುರುಗಾಂವ್‌ನಲ್ಲಿ ತಿಂಗಳ ಬಾಡಿಗೆ ಟ್ರಕ್‌ನಂತೆ ಬಡಿಯಿತು. ಕಚೇರಿಯ ಹತ್ತಿರದಲ್ಲೇ ಇರುವ ಮನೆಗೆ 25,000 ನೀಡಬೇಕಾಯಿತು. ಹೊರಗಿನ ಊಟ ಸೇರಿ 6,000 ರೂ, ದಿನಸಿ ಮತ್ತು ವಾರಾಂತ್ಯದ ಯೋಜನೆಗಳಿಗೆ 8,000 ರೂ, ಒಟ್ಟಾರೆ ಮಾಸಿಕ ಖರ್ಚು 45,000 ರೂ ಎಂದು ವಿವರಿಸಿದ್ದಾರೆ. ಆದರೆ ಬೆಂಗಳೂರಿನಲ್ಲಿ ಇಂತಹ ಪರಿಸ್ಥಿತಿ ಇರಲಿಲ್ಲ. ಬೆಂಗಳೂರಿನ ಅಪಾರ್ಟ್‌ಮೆಂಟ್ ರೆಂಟ್ 18,000 ರೂ, ದಿನಸಿ ಮತ್ತು ಊಟ ಸ್ವಲ್ಪ ಅಗ್ಗವಾಗಿತ್ತು. ಆಟೋಗಳು ಮತ್ತು ಕ್ಯಾಬ್‌ಗಳು ಅಷ್ಟೇನು ದುಬಾರಿ ಎಂದು ಅನಿಸರಲಿಲ್ಲ. ಹೀಗಾಗಿ ಇಲ್ಲಿ ತಿಂಗಳಿಗೆ 35,000 ರೂ ಖರ್ಚು ಆಗುತ್ತಿತ್ತು ಎಂದು ಹೇಳಿದ್ದಾರೆ.





