ಡೊನಾಲ್ಡ್ ಟ್ರಂಪ್ ಮತ್ತದೇ ರಾಗ: 200% ತೆರಿಗೆ ಬೆದರಿಕೆ ಹಾಕಿ ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದೇನೆಂದ ಅಮೆರಿಕ ಅಧ್ಯಕ್ಷ

Share with

ವಾಷಿಂಗ್ಟನ್, ಅಕ್ಟೋಬರ್ 13:  ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  (Donald Trump) ಈ ಹಿಂದೆಯೂ ಹಲವು ಬಾರಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ತಾನೇ ನಿಲ್ಲಿಸಿದ್ದೇನೆಂದು ಹೇಳಿದ್ದರು. ಅವರ ಈ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನಿರಾಕರಿಸಿದ್ದರೂ ಟ್ರಂಪ್ ತನ್ನ ಹೇಳಿಕೆಯನ್ನು ಬದಲಿಸಿರಲಿಲ್ಲ. ಈಗ ಮತ್ತೆ ಇದರ ಕುರಿತು ಹೇಳಿಕೆ ನೀಡಿರುವ ಅವರು,ಹೆಚ್ಚಿನ ತೆರಿಗೆ ವಿಧಿಸುತ್ತೇನೆಂದು ಬೆದರಿಸುವ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ನಾನೇ ನಿಲ್ಲಿಸಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.

ಟ್ರಂಪ್ ಹೇಳಿದ್ದೇನು?
“ನಾನು ಕೆಲವು ಯುದ್ಧಗಳನ್ನು ಸುಂಕಗಳ ಆಧಾರದ ಮೇಲೆಯೇ ಇತ್ಯರ್ಥಪಡಿಸಿದ್ದೇನೆ. ಉದಾಹರಣೆಗೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಸಮಯದಲ್ಲಿ ನಿಮ್ಮ ಬಳಿ ಪರಮಾಣು ಶಸ್ತ್ರಾಸ್ತ್ರಗಳಿದ್ದು, ನೀವು ಯುದ್ಧ ಮಾಡಲು ಬಯಸಿದರೆ ನಾನು ನಿಮ್ಮಿಬ್ಬರ ಮೇಲೂ ಶೇ. 100, ಶೇ. 150 ಮತ್ತು ಶೇ. 200 ರಷ್ಟು ಸುಂಕಗಳನ್ನು ವಿಧಿಸುತ್ತೇನೆ ಎಂದು ಬೆದರಿಸುವ ಮೂಲಕ ನಾನು ಯುದ್ಧ ನಿಲ್ಲಿಸುವಲ್ಲಿ ಕಾರಣವಾಗಿದ್ದೇನೆ” ಎಂದು  ಟ್ರಂಪ್ ಈಜಿಪ್ಟ್‌ನಲ್ಲಿ ನಡೆಯಲಿರುವ ಶಾಂತಿ ಶೃಂಗಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಇಸ್ರೇಲ್ ಮತ್ತು ಹಮಾಸ್ ನಡುವಿನ ಒತ್ತೆಯಾಳು-ಕೈದಿ  ವಿಚಾರವಾಗಿ ಇಸ್ರೇಲ್ಗೆ ಹೋಗುವಾಗ ಮುನ್ನ ವರದಿಗಾರರೊಂದಿಗೆ ಮಾತನಾಡಿದ ಅವರು,”ನಾನು 8 ಜಾಗತಿಕ ಸಂಘರ್ಷಗಳನ್ನು ಕೊನೆಗೊಳಿಸಿದ್ದೇನೆ. ಇದು ಬೇರೆ ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಈ ವರ್ಷ ನಡೆದ ಭಾರತ ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ಸುಂಕದ ಬೆದರಿಕೆ ಇಟ್ಟು ಒಪ್ಪಂದ ಮಾಡಿಸಿದ್ದೇನೆ” ಎಂದು ಹೇಳಿಕೊಂಡಿದ್ದಾರೆ. ಆದರೆ ಭಾರತ ಮಾತ್ರ ಆಪರೇಷನ್ ಸಿಂಧೂರ್ ಅಥವಾ ಪಾಕಿಸ್ತಾನದೊಂದಿಗಿನ ಕದನದಲ್ಲಿ ಟ್ರಂಪ್ ಎಂದಿಗೂ ಮಧ್ಯಪ್ರವೇಶ ಮಾಡಿಲ್ಲ ಎಂದಿದೆ.


Share with

Leave a Reply

Your email address will not be published. Required fields are marked *