ಅಮಿತಾಬ್ ಬಚ್ಚನ್ ಎದುರು ಬಾಲಕನ ಉದ್ಧಟತನ: ವಿಡಿಯೋ ವೈರಲ್

Share with

ಅಮಿತಾಬ್ ಬಚ್ಚನ್ (Amitabh Bachchan) ಭಾರತದ ಲಿಜೆಂಡರಿ ನಟ. ಭಾರತೀಯ ಚಿತ್ರರಂಗದ ಹಾಲಿ ಸೂಪರ್ ಸ್ಟಾರ್ಗಳೆ ಎದ್ದು ನಿಂತು, ನಡು ಬಗ್ಗಿಸಿ ಮಾತನಾಡುವಂಥಹಾ ವ್ಯಕ್ತಿತ್ವ ಅವರದ್ದು. ಆದರೆ ಇತ್ತೀಚೆಗೆ ಬಾಲಕನೊಬ್ಬ ಅಮಿತಾಬ್ ಬಚ್ಚನ್ ಎದುರು ಅಹಂಕಾರದ ವರ್ತನೆ ತೋರಿದ್ದಾನೆ. ಅವರ ಹಿರಿತನಕ್ಕೂ ಗೌರವ ಕೊಡದೆ ಏಕವನದಲ್ಲಿ ಬಚ್ಚನ್ ಅವರನ್ನು ಮಾತನಾಡಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಅಷ್ಟೆಲ್ಲಾ ಆದರೂ ಸಹ ಬಚ್ಚನ್ ಅವರು ಎಲ್ಲಿಯೂ ತಾಳ್ಮೆ ಕಳೆದುಕೊಳ್ಳದೆ ಆ ಹುಡುಗನನ್ನು ನಿಭಾಯಿಸಿರುವ ರೀತಿ ಅನುಕರಣೀಯವಾಗಿದೆ.


ಅಮಿತಾಬ್ ಬಚ್ಚನ್ ಅವರು ಹಲವು ವರ್ಷಗಳಿಂದಲೂ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮ ನಡೆಸಿಕೊಡುತ್ತಿರುವುದು ಗೊತ್ತಿರುವ ವಿಷಯವೇ ಆಗಿದೆ. ದೇಶದ ಹಲವು ಭಾಗಗಳಿಂದ, ಹಲವು ಹಿನ್ನೆಲೆಯುಳ್ಳ ವ್ಯಕ್ತಿಗಳು ಶೋನಲ್ಲಿ ಭಾಗವಹಿಸುತ್ತಾರೆ. ಈ ವರೆಗೆ ಬಂದರುವ ಬಹುತೇಕ ಎಲ್ಲ ಸ್ಪರ್ಧಿಗಳು ಅಮಿತಾಬ್ ಬಚ್ಚನ್ ಅವರನ್ನು ಗೌರವದಿಂದ ಕಂಡು ಅವರೊಂದಿಗೆ ವಿನಯದಿಂದಲೇ ವರ್ತಿಸಿದ್ದಾರೆ. ಆದರೆ ಇತ್ತೀಚೆಗಿನ ಎಪಿಸೋಡ್ಗೆ ಬಾಲಕನೊಬ್ಬ ಬಂದಿದ್ದ ಆತನ ವರ್ತನೆ ಕಂಡು ಪ್ರೇಕ್ಷಕರೇ ಕೆಂಡಾಮಂಡಲವಾಗಿದ್ದಾರೆ.

ಗುಜರಾತ್ನ ಗಾಂಧಿನಗರದಿಂದ ಇಶಿತ್ ಭಟ್ ಹೆಸರಿನ ಬಾಲಕ ಇತ್ತೀಚೆಗಿನ ಎಪಿಸೋಡ್ನಲ್ಲಿ ಬಚ್ಚನ್ ಅವರೆದುರು ಹಾಟ್ಸೀಟ್ನಲ್ಲಿ ಕುಳಿತು ಪ್ರಶ್ನೆಗಳಿಗೆ ಉತ್ತರಿಸುವ ಅವಕಾಶ ಪಡೆದಿದ್ದ. ಬಚ್ಚನ್ ಅವರೆದುರು ಆ ಬಾಲಕನ ವರ್ತನೆ, ಮಾತುಗಳು ಅಗೌರವದಿಂದ ಕೂಡಿದ್ದವು. ಬಚ್ಚನ್ ಅವರು ಶೋನ ನಿಯಮಗಳನ್ನು ಸ್ಪರ್ಧಿಗಳಿಗೆ ವಿವರಿಸುವುದು, ಆಟ ಶುರುವಾದ ಬಳಿಕ ಆಪ್ಷನ್ಗಳನ್ನು ನೀಡುವುದು ನಿಯಮ. ಆದರೆ ಆ ಬಾಲಕ ‘ನೀನು ಅದನ್ನೆಲ್ಲ ನನಗೆ ಹೇಳುವುದು ಬೇಡ. ನೇರವಾಗಿ ಪಾಯಿಂಟ್ಗೆ ಬರೋಣ’ ಎಂದ. ಆದರೆ ಅಮಿತಾಬ್, ಬಾಲಕನ ಮಾತಿಗೆ ವಿಚಲಿತರಾಗಲಿಲ್ಲ.

ಆಟ ಶುರುವಾದಾಗ ಆರಂಭದಲ್ಲಿ ಬಹಳ ಸರಳ ಪ್ರಶ್ನೆಗಳನ್ನು ಕೇಳಲಾಯ್ತು. ಆಗೆಲ್ಲ ಬಾಲಕ ಅತಿಯಾದ ಆತ್ಮವಿಶ್ವಾಸದಲ್ಲಿ ಉತ್ತರ ನೀಡಿದ, ಅಲ್ಲದೆ, ‘ಆಪ್ಷನ್ ನೀಡುವುದು ಬೇಡ, ಬೇಗ ಲಾಕ್ ಮಾಡು’ ಎಂದ, ಬಚ್ಚನ್ ಅವರು ಆಪ್ಷನ್ ವಿವರಿಸಲು ಹೋದರೆ ‘ಬೇಗ ಲಾಕ್ ಮಾಡು, ಆಪ್ಷನ್ ಬೇಡ’ ಎಂದ ಆದರೆ ಅಮಿತಾಬ್ ಬಚ್ಚನ್ ಇದರಿಂದ ವಿಚಲಿತರಾದರೆ, ಅವರೂ ಸಹ ಸಿಟ್ಟು ಮಾಡಿಕೊಳ್ಳದೆ ಸಾವಧಾನದಿಂದಲೇ ಆ ಬಾಲಕನಿಗೆ ಸ್ಪಂದಿಸಿದರು.


Share with

Leave a Reply

Your email address will not be published. Required fields are marked *