ಸಾಯುವುದಕ್ಕೂ ಸರಿಯಾಗಿ ಒಂದು ವರ್ಷ ಮೊದಲು ಅಪ್ಪು ಮಾಡಿದ ಒಳ್ಳೆಯ ಕೆಲಸ ನೋಡಿ

Share with

ಪುನೀತ್ ರಾಜ್ಕುಮಾರ್ (Puneeth Rajkumar) ಅವರು ನಿಧನ ಹೊಂದಿ ಇಂದಿಗೆ (ಅಕ್ಟೋಬರ್ 29) ಒಂದು ವರ್ಷ ಕಳೆದಿರುವುದು ಗೊತ್ತೇ ಇದೆ. ಇಂದು ಅವರ ನಾಲ್ಕನೇ ವರ್ಷದ ಪುಣ್ಯ ತಿಥಿ. ಪುನೀತ್ ನಿಧನ ಹೊಂದುತ್ತಾರೆ ಎಂದರೆ ಯಾರೆಂದರೆ ಯಾರೂ ಊಹಿಸಿರಲಿಲ್ಲ. ಅವರು ಸಾಯುವಾಗ ಅವರಿಗೆ 46 ವರ್ಷ ವಯಸ್ಸು. ಪುನೀತ್ ಸಾಯುವುದಕ್ಕೂ ಒಂದು ವರ್ಷ ಮೊದಲು ಅವರು ಒಂದು ಒಳ್ಳೆಯ ಕೆಲಸ ಮಾಡಿದ  ವಿಷಯವನ್ನು ಈಗ ಅವರ ಪುಣ್ಯ ತಿಥಿ ಸಮಯದಲ್ಲಿ ನೆನಪಿಸಿಕೊಳ್ಳಲಾಗುತ್ತಿದೆ.

ಪುನೀತ್ ರಾಜ್ಕುಮಾರ್ ಅವರು ನಿಧನ ಹೊಂದಿದ ಬಳಿಕ ಅವರು ಮಾಡಿದ ಒಳ್ಳೆಯ ಕೆಲಸಗಳ ವಿಷಯಗಳು ಗೊತ್ತಾದವು. ಸಾಮಾನ್ಯವಾಗಿ ಪುನೀತ್ ಅವರು ಎಲ್ಲಿಯೂ ತಾವು ಮಾಡಿದ್ದನ್ನು ಹೇಳಿಕೊಳ್ಳುತ್ತಿರಲಿಲ್ಲ. ಇದಕ್ಕೆ ಅವರ ಕುಟುಂಬದವರು ಹಾಕಿಕೊಟ್ಟ ಮಾರ್ಗದರ್ಶನವೇ ಕಾರಣ ಎಂದರೂ ತಪ್ಪಾಗಲಾರದು. ಹೀಗಾಗಿ, ಅವರು ಮಾಡಿಕೊಂಡ ಒಳ್ಳೆಯ ಕೆಲಸದ ಬಗ್ಗೆ ಎಲ್ಲಿಯೂ ಹೇಳುತ್ತಾ ಇರಲಿಲ್ಲ.

ಪುನೀತ್ ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್’. ಕೊವಿಡ್ ಕಾರಣಕ್ಕೆ ಸಿನಿಮಾದ ಶೂಟ್ ವಿಳಂಬ ಆಗಿತ್ತು. 2020ರ ಅಕ್ಟೋಬರ್ನಲ್ಲಿ ಈ ಚಿತ್ರದ ಶೂಟಿಂಗ್ಗಾಗಿ ಪುನೀತ್ ಅವರು ಗಂಗಾವತಿಗೆ ತೆರಳಿದ್ದರು. ಈ ವೇಳೆ ಅವರು ಮಾಡಿದ ಒಳ್ಳೆಯ ಕೆಲಸದ ಬಗ್ಗೆ ಸೋಶಿಯಲ್ ಮೀಡಿಯಾ ಬಳಕೆದಾರರು ಹಂಚಿಕೊಂಡಿದ್ದಾರೆ.

‘ಜೇಮ್ಸ್ ಚಿತ್ರೀಕರಣಕ್ಕೆ ಪುನೀತ್ ರಾಜಕುಮಾರ್ ಅವರು ಗಂಗಾವತಿಯ ಅನೆಗುಂದಿಗೆ ಬಂದಿದ್ದರು. ತಾಲೂಕಿನ ಮಲ್ಲಾಪುರ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗಾಗಿ, ಶಾಲೆಯ ಕಲಿಕಾ ವಾತಾವರಣವನ್ನು ಉತ್ತೇಜಿಸಲು, ವಿದ್ಯಾರ್ಥಿಗಳಿಗೆ ಕಲಿಕಾ ಪ್ರೋತ್ಸಾಹವನ್ನು ನೀಡುವ ಉದ್ದೇಶದಿಂದ ಒಂದು ಲಕ್ಷ ರೂ ಅನ್ನು ಪ್ರೋತ್ಸಾಹ ಧನವಾಗಿನೀಡಿದ್ದರು. ಇದು ದಿನಾಂಕ 21-10, 2020ರಂದು ಅಂದರೆ ಅವರು ತೀರಿಕೊಳ್ಳುವ ಒಂದು ವರ್ಷ ಮುಂಚೆ ಈ ಕೆಲಸ ಮಾಡಿದ್ದರು.. ಧನ ಸಹಾಯ ಮಾಡಿದ ಬಗ್ಗೆ ಶಾಲೆಯಿಂದ ನೀಡಿದ ಪತ್ರಕ್ಕೆ ಅಪ್ಪು ರವರು ಒಂದು ಪ್ರತಿ ಪಡೆದು ಸಹಿ ಮಾಡಿರುವುದು’ ಎಂದು ಬರೆಯಲಾಗಿದೆ.


Share with

Leave a Reply

Your email address will not be published. Required fields are marked *