ಕೊಂಡೆವೂರು ಮಠದಲ್ಲಿ ವಿಶಿಷ್ಟ ಕರ್ಕಾಟಕ ಮಾಸದ ಔಷಧೀಯ ಗಂಜಿ ಕಾರ್ಯಕ್ರಮ

Share with

ಉಪ್ಪಳ : ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಆಶ್ರಯದಲ್ಲಿ ಶ್ರೀ ನಿತ್ಯಾನಂದ ಆಯುರ್ವೇದ ಸಂರಕ್ಷಣಾ ಸಮಿತಿ ಕೇರಳಂ ಸಹಯೋಗದಲ್ಲಿ ಕರ್ಕಾಟಕ ಮಾಸದ ಔಷಧೀಯ ಗಂಜಿ ಕಾರ್ಯಕ್ರಮ ಆ.9ರಂದು ಸಂಪನ್ನಗೊಂಡಿತು.

ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೀಪ ಪ್ರಜ್ವಲನೆ ಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಣ್ಣೂರಿನ ಪವಿತ್ರನ್ ಗುರುಕ್ಕಳ್ ರವರು ಮಲಯಾಳದಲ್ಲಿ ಮತ್ತು ಶ್ರೀ ಶಾರದಾ ಆಯುರ್ವೇದಿಕ್ ಕಾಲೇಜಿನ ಡಾ. ಅನೂಪ್ ರವರು ಕನ್ನಡದಲ್ಲಿ ಔಷಧೀಯ ಗಂಜಿಯ ಮಹತ್ವ ಮತ್ತು ನಮ್ಮ ಸುತ್ತಮುತ್ತಲಿನ ಗಿಡಮೂಲಿಕೆಗಳ ಪರಿಚಯ ಮಾಡಿ ಕೊಟ್ಟರು.

ನಂತರ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕಾಸರಗೋಡು ಜಿಲ್ಲೆಯ ಸಂಸದ ರಾಜಮೋಹನ್ ಉಣ್ಣಿತ್ತಾನ್, ಪಯ್ಯನ್ನೂರಿನ ಸೂರ್ಯ ಟ್ರಸ್ಟ್ ಅಧ್ಯಕ್ಷರು ಹಾಗೂ ಸನ್‌ಶನ್ ಹರ್ಬಲ್ಸ್ ನ ಎಂ.ಡಿ ಶಿವ ಪ್ರಸಾದ್, ತಲಕ್ಕೇರಿಯ ಬಿ.ಎಸ್ ಪೈ ಲಿಮಿಟೆಡ್‌ ನ ಎಂ.ಡಿ ಕಿಶೋರ್ ಶಣೈ ರವರು ಕಾರ್ಯಕ್ರಮದ ಮಹತ್ವದ ಕುರಿತು ಸಂತಸ ವ್ಯಕ್ತಪಡಿಸಿ ಮಾತನಾಡಿದರು.

ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ, ಕಾಞಂಗಾಡಿ ಕಾಞಂಗಾಡಿನ ವಕೀಲರಾದ ಪದ್ಮನಾಭನ್, ಗೋಕುಲದಾಸ್ ಬಂದ್ಯೋಡು, ಪಿ.ಆರ್ ಶೆಟ್ಟಿ ಪೊಯ್ಯಲ್ ಮತ್ತು ಸಜೀವನ್ ಪಾಲಕ್ಕಾಡ್ ರವರುಗಳು ಅತಿಥಿಗಳಾಗಿ ಉಪಸ್ಥಿತರಿದ್ದರು.

1200 ಕ್ಕೂ ಹೆಚ್ಚು ಔಷಧೀಯ ಸಸ್ಯಗಳ ಮಾಹಿತಿ ಇರುವ ಕೇರಳದ ಪ್ರಸಿದ್ಧ ನಾಟಿ ವೈದ್ಯ ಶ್ರೀ ಶರೀಫ್ ಫರಾಲ್ ರವರಿಗೆ 2026 ನೇ ಸಾಲಿನ ಆಯುಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು . ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ತುಳುನಾಡ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ ಎಂ. ಬಿ ಪುರಾಣಿಕ್ ರವರು ಇಂತಹ ಕಾರ್ಯಕ್ರಮದ ಮಹತ್ವವನ್ನು ಅರಿತು ಪರಿಸರದ ಬಗ್ಗೆ ಹೆಚ್ಚು ಅರಿವು ಮೂಡಿಸಿಕೊಳ್ಳಬೇಕು ಎಂದರು. ಬಳಿಕ ಪೂಜ್ಯ ಶ್ರೀಗಳು ಕರ್ಕಾಟಕ ಮಾಸದ ಔಷಧೀಯ ಗಂಜಿಯ ಬಗ್ಗೆ ಆಶೀರ್ವಚನ ನೀಡಿದರು.

ಕುಮಾರಿ ಶ್ರಾವಣ್ಯ ಕೊಂಡೆವೂರುರವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದ ಸ್ವಾಗತವನ್ನು ಕಣ್ಣೂರಿನ ನಿತ್ಯಾನಂದ ಆಯುರ್ವೇದಿಕ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಶ್ರೀ ಜಯದೇವನ್ ಹಾಗೂ ಶ್ರೀ ಸದಾಶಿವ ಮೋಂತಿಮಾರು ರವರು ವಂದನಾರ್ಪಣೆ ಮಾಡಿದರು. ಶ್ರೀ ದಿನಕರ್ ಹೊಸಂಗಡಿ ಮತ್ತು ಶೈಲೇಶ್ ನಿರೂಪಣೆ ಮಾಡಿದರು. ಬಳಿಕ ಕೇರಳದ ಪ್ರಸಿದ್ಧ ನಾಟಿ ವೈದ್ಯರು ಪರಿಸರದ ಖಾದ್ಯ ಗಿಡ ಬಳ್ಳಿ ಎಲೆಗಳನ್ನು ಬಳಸಿ ತಯಾರಿಸಿದ ಗಂಜಿ ಮತ್ತು ವಿವಿಧ ಖಾದ್ಯ ವಸ್ತುಗಳನ್ನು ಆಗಮಿಸಿದ ಪರಿಸರಾಸಕ್ತರು ಸವಿದು ಸಂತಸಪಟ್ಟರು.


Share with

Leave a Reply

Your email address will not be published. Required fields are marked *