ಬಂಟ್ವಾಳ: ಕಾರ್ಮಿಕರ ರಾಷ್ಟ್ರ ಮಟ್ಟದ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆ. 18 ರಂದು ಮಂಗಳೂರು ಟೌನ್ ಹಾಲ್ ಮುಂಭಾಗದಲ್ಲಿ ದ.ಕ. ಜಿಲ್ಲಾ ಬಿಎಂಎಸ್ ಆಶ್ರಯದಲ್ಲಿ ಪ್ರತಿಭಟನಾ ಆಂದೋಲನ ಹಮ್ಮಿಕೊಂಡಿದೆ ಎಂದು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು. ಹೇಳಿದ್ದಾರೆ.

ಅವರು ಆ. 10 ರಂದು ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲಾ ಮಟ್ಟದಲ್ಲಿ ಆಟೋರಿಕ್ಷಾ, ಆಶಾ ಕಾರ್ಯಕರ್ತೆಯರು, ಬೀಡಿ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿರ ವಿವಿಧ ಬೇಡಿಕೆಗಳ ಬಗ್ಗೆ ಪ್ರಸ್ತಾವಿಸಿದರು.
ರಾಷ್ಟ್ರ ಮಟ್ಟದಲ್ಲಿ ಆ. 17 ರಂದು ಆಂದೋಲನ ನಡೆಯುವುದು. ನಾಗರ ಪಂಚಮಿ ಹಬ್ಬದ ಕಾರಣ ಜಿಲ್ಲೆಯಲ್ಲಿ 18 ರಂದು ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮಣಿಹಳ್ಳ, ಸಂಘಟನೆಯ ಪ್ರಮುಖರಾದ ನಾರಾಯಣ ಪೂಜಾರಿ, ನಳಿನಿ ಅಡ್ಯಾರು, ಗಿರಿಜಾ, ತುಳಸಿ ದೇವರಾಜ್, ಸದಾನಂದ ಗೌಡ, ಸತೀಶ್ ಭಂಡಾರಿಬೆಟ್ಟು, ಶ್ರೀಕಾಂತ್ ಪಾಣೆಮಂಗಳೂರು ಉಪಸ್ಥಿತರಿದ್ದರು.




