ಕಾಸರಗೋಡು: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ( ಕೇರಳ ಕನ್ನಡಪರ ಸಂಘಟನೆಗಳ ಒಕ್ಕೂಟ) ಕೊಡಮಾಡುವ ಪ್ರತಿಷ್ಠಿತ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಹಿರಿಯ ಮಕ್ಕಳ ತಜ್ಞರಾದ ಕಾಸರಗೋಡಿನ ಡಾ.ಬಿ ನಾರಾಯಣ ನಾಯ್ಕ ಆಯ್ಕೆಯಾಗಿದ್ದಾರೆ.

ನ.29 ರಂದು ಜಿ.ಹೆಚ್.ಎಸ್.ಎಸ್ ಕಾಯರ್ ಕಟ್ಟೆ ಶಾಲಾ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.




